ಉಡುಪಿ: ಆಗಸ್ಟ್ 06 :ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚುತಿದ್ದು ಮಣಿಪಾಲ ಠಾಣೆ ವ್ಯಾಪ್ತಿಯ ಹಯಗ್ರೀವ ನಗರದ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಂತಾ ಕಾಮತ್ (84) ಅವರ 20 ಗ್ರಾಂ ತೂಕದ ಚೈನ್ ಅನ್ನು ಕಳ್ಳನೊಬ್ಬ ಕಸಿದು ಪರಾರಿಯಾಗಿರುವ ಘಟನೆ ಆ.5ರಂದು ಬೆಳಗ್ಗೆ 7 ಗಂಟೆಗೆ ಸಂಭವಿಸಿದೆ.
ಶಾಂತಾ ಮನೆ ಕೆಲಸಕ್ಕೆಂದು ಸಗ್ರಿನೋಳೆ ಶಾಲೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಂಡೇಲು ಎಂಬಲ್ಲಿಗೆ ತಲುಪಿದಾಗ ಹಿಂದುಗಡೆಯಿಂದ ಬಂದ ವ್ಯಕ್ತಿ ಚೈನ್ ಕಸಿದು ಪರಾರಿಯಾಗಿದ್ದಾನೆ.ಕಳ್ಳ ಸುಮಾರು 30ರಿಂದ 35 ವರ್ಷದವನು ಎಂದು ಅಂದಾಜಿಸಲಾಗಿದೆ.