ಮಂಗಳೂರು : ಆಗಸ್ಟ್ 05:ಮಂಗಳೂರು-ಬೆಂಗಳೂರು ಯಶವಂತಪುರ ಎಕ್ಸಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.
ವಾರಕ್ಕೆ ಮೂರು ಬಾರಿ ಮಂಗಳೂರು ಜಂಕ್ಷನ್ನಿಂದ ಬೆಂಗಳೂರಿನ ಯಶವಂತಪುರದವರೆಗೆ ಸಂಚರಿಸುವ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16576) ರೈಲಿನ ವೇಳಾಪಟ್ಟಿಯನ್ನು ನವೆಂಬರ 1 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಪರಿಷ್ಕೃತ ಸಮಯದ ಪ್ರಕಾರ ಈ ರೈಲು (16576) ಮಂಗಳೂರು ಜಂಕ್ಷನ್ನಿಂದ ಬೆಳಿಗ್ಗೆ 11.30 ರ ಬದಲು ಬೆಳಿಗ್ಗೆ 7 ಗಂಟೆಗೆ ಹೊರಟು, ಅದೇ ದಿನ ರಾತ್ರಿ 8:45 ರ ಬದಲು ಸಂಜೆ 4.30ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.