ಕುಂದಾಪುರ: ಆಗಸ್ಟ್ 05:ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾಂಕ್ರೀಟ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ.
ಮೃತರನ್ನು ಕಾರ್ಕಳದ ಕಾರ್ತಿಕ್ ರಾವ್ (46) ಎಂದು ಗುರುತಿಸಲಾಗಿದೆ.
ಆ.4 ರ ಬೆಳಿಗಿನ ಜಾವ ಕುಂಭಾಶಿ ಗ್ರಾಮದ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಹತ್ತಿರ ನಿರ್ಮಾಣ ಹಂತದ ಅಪಾರ್ಟಮೆಂಟನ ಕಾಂಕ್ರೇಟಿಕರಣದ ಕೆಲಸದ ಉಸ್ತುವಾರಿ ನೋಡಿಕೊಳ್ಳುವ ಬಗ್ಗೆ ಕೆಲಸಕ್ಕೆ ಹೋಗಿ ಅಲ್ಲಿ ಕೆಲಸದ ಉಸ್ತುವಾರಿ ನೋಡಿಕೊಂಡಿರುವಾಗ ಬೆಳಿಗ್ಗೆ 08:30 ಗಂಟೆಗೆ ನಿರ್ಮಾಣ ಹಂತದ ಅಪಾರ್ಟಮೆಂಟನ 8 ನೇ ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ನೆಲಕ್ಕೆ ಬಿದ್ದು ತೀವೃವಾಗಿ ಗಾಯಗೊಂಡು ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .