ಉಡುಪಿ:ಆಗಸ್ಟ್ 05:ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿಗಾಗಿ ಚಾಲಕ ಬಸ್ ಅನ್ನೇ ಆಸ್ಪತ್ರೆಗೆ ಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ನಡೆದಿತ್ತು
ಇದೀಗ ಉಡುಪಿ ಯಲ್ಲೂ ಕೂಡ ಇಂತಹುದೊಂದು ಘಟನೆ ನಡೆದಿದ್ದು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಚಾಲಕ ಹಾಗೂ ನಿರ್ವಾಹಕನ ನಡೆಗೆ ವ್ಯಾಪಾಕ ಪ್ರಶಂಸೆ ವ್ಯಕ್ತ ವಾಗಿದೆ
ಇಂದು ಸೋಮವಾರ (ಆಗಸ್ಟ್ 5) ರ ಬೆಳಿಗ್ಗೆ ಈ ಘಟನೆ ನಡೆದಿದ್ದು ಶಿರ್ವ ದಿಂದ ಉಡುಪಿಗೆ ನವೀನ್ ಬಸ್ಸಿನಲ್ಲಿ ಉಡುಪಿಗೆ ಬರುತ್ತಿದ್ದ ಯುವತಿ ಉಡುಪಿಯ ಹಳೆ ತಾಲ್ಲೂಕು ಕಚೇರಿಗೆ ಬರುತ್ತಿದ್ದಂತೆ ಬಸ್ಸಿನಲ್ಲೇ ವಾಂತಿ ಮಾಡಿ ಅಸ್ವಸ್ಥಗೊಂಡಿದ್ದಾಳೆ
ಕೂಡಲೇ ಎಚ್ಚೆತ್ತ ನವೀನ್ ಬಸ್ ನ ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂ ಬಸ್ಸನ್ನು ತಕ್ಷಣವೇ ಟಿಎಂಎ ಪೈ ಆಸ್ಪತ್ರೆಗೆ ಕೊಂಡೊಯ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಜೊತೆಗೆ ಬಾಲಕಿಯ ಮನೆಯವರಿಗೆ ಮಾಹಿತಿ ಮನೆಯವರು ಬರುವ ತನಕ ಯುವತಿಗೆ ಚಿಕಿತ್ಸೆಗೆ ಬಸ್ ಸಿಬ್ಬಂದಿ ಸಹಕಾರ ನೀಡಿದ್ದಾರೆ.