ಕಾರ್ಕಳ :ಆಗಸ್ಟ್ 04 :ಕಾರ್ಕಳ ತಾಲೂಕಿನ 1811ನೇ ಮದ್ಯ ವರ್ಜನ ಶಿಬಿರದ ಪಾನಮುಕ್ತ ನವಜೀವನ ಸದಸ್ಯರ ಮಾಸಿಕ ಸಭೆ ಹಿರ್ಗಾನ ಶ್ರೀ ಅಧಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಅಶೋಕ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮದ್ಯವರ್ಜನ ಶಿಬಿರ ಕಳೆದು ಒಂದು ತಿಂಗಳ ನಂತರ ಪಾನಮುಕ್ತ ಸದಸ್ಯರ ಅನು ಪಾಲನೆಗಾಗಿ ಮಾಸಿಕ ಸಭೆಯನ್ನು ಇರ್ಗಾನದ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಸನ್ನಿಧಾನದಲ್ಲಿ ಹಮ್ಮಿಕೊಳ್ಳಲಾಯಿತು. ಶಿಬಿರಕ್ಕೆ ಒಟ್ಟು 56 ಜನ ಸೇರಿದ್ದು ಎಲ್ಲಾ ಸದಸ್ಯರು ಸಂಪೂರ್ಣ ಪಾನಮುಕ್ತರಾಗಿ ಅವರ ಕುಟುಂಬದವರ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಮತ್ತು ಈ ಶಿಬಿರವನ್ನು ಆಯೋಜಿಸಿದ ಎಲ್ಲರಿಗೂ ಹಾಗೂ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು
ನಿರಂತರ ಪಾನಮುಕ್ತ ಜೀವನ ನಡೆಸಲು ನೂತನನ ಜೀವನ ಸಮಿತಿ ಸದಸ್ಯರಿಗೆ ಹಾಗೂ ಕುಟುಂಬದವರಿಗೆ ಸೂಕ್ತ ತರಬೇತಿಯನ್ನು ಉಡುಪಿ ಪ್ರಾದೇಶಿಕ ವಿಭಾಗದ ಜನ ಜಾಗೃತಿ ಯೋಜನಾಧಿಕಾರಿ ಶ್ರೀ ಗಣೇಶ್ ಆಚಾರ್ಯರವರು ನೆರವೇರಿಸಿದರು. ಈ ಸಂದರ್ಭ ಒಂದು ತಿಂಗಳಲ್ಲಿ ಸಾಧನೆಗಳನ್ನು ಮಾಡಿದ ಎಲ್ಲಾ ಪಾನಮುಕ್ತ ಸದಸ್ಯರನ್ನು ಅಭಿನಂದಿಸಿದರು.
ಸಭೆಯಲ್ಲಿ ತಾಲ್ಲೂಕು ಜನಜಾಗೃತಿ ಅಧ್ಯಕ್ಷರಾದ ಉದಯ್ ಕುಮಾರ್ ಹೆಗ್ಡೆ, ಉಪಾಧ್ಯಕ್ಷರಾದ ವಿಕ್ರಮ್ ಕಿಣಿ, ಜನಜಾಗೃತಿ ಸದಸ್ಯರಾದ ಉದಯ್ v ಶೆಟ್ಟಿ, ಕರುಣಾಕರ್ ಕಡಂಬ, ಸಮಿತಿ ಉಪಾಧ್ಯಕ್ಷರಾದ ವಾಸು ಶೆಟ್ಟಿ, ತಾಲ್ಲೂಕು ಯೋಜನಾಧಿಕಾರಿಗಳಾದ ಶ್ರೀಮತಿ ಹೇಮಲತಾ, ಒಕ್ಕೂಟ ಅಧ್ಯಕ್ಷರಾದ ಸತೀಶ್, ಸುಭಾಷ್, ನವಜೀವನ ಸಮಿತಿ ಸದಸ್ಯರು, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿ, ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರ ಮನೆಯವರು ಉಪಸ್ಥಿತರಿದ್ದರು..