ಉಡುಪಿ :ಆಗಸ್ಟ್ 04 : ಉಡುಪಿ ಜಿಲ್ಲಾ ಸಂಸ್ಕೃತ ಸಹ ಶಿಕ್ಷಕರ ತರಬೇತಿ ಕಾರ್ಯಗಾರವು ಒಳಕಾಡು ಪ್ರೌಢಶಾಲೆಯಲ್ಲಿ ದಿನಾಂಕ 3.8.2024 ಶನಿವಾರದಂದು ನಡೆಯಿತು.
ಈ ತರಬೇತಿ ಕಾರ್ಯಗಾರದ ಸಭಾ ಅಧ್ಯಕ್ಷತೆಯನ್ನು ಶ್ರೀಯುತ ಮಾಧವ ಅಡಿಗ ಅವರು ವಹಿಸಿದ್ದರು.ಡಿ ಡಿ ಪಿ ಐ ಆಫೀಸಿನ ವಿಷಯ ಪರಿವೀಕ್ಷಣಾಧಿಕಾರಿ ಶ್ರೀಯುತ ನಾಗರಾಜ್ ಇವರು ಸಂಸ್ಕೃತ ಉಳಿಯುವಿಕೆಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿರುವುದು ಅನಿವಾರ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಳಕಾಡು ಪ್ರೌಢಶಾಲೆಯಲ್ಲಿ ಸಂಸ್ಕೃತ ಅಧ್ಯಾಪಕರಾಗಿ ನಿವೃತ್ತಿಯಾಗಿರುವ ಶ್ರೀಯುತ ವೆಂಕಟರಮಣ ಉಪಾಧ್ಯಾಯ ಅವರನ್ನು ಗೌರವಿಸಲಾಯಿತು.
ತರಬೇತಿ ಕಾರ್ಯಗಾರದಲ್ಲಿ ಗದ್ಯ,ಪದ್ಯ,ವ್ಯಾಕರಣ ಮುಂತಾದ ವಿಷಯಗಳ ಚರ್ಚೆ ನಡೆಯಿತು. ಅಪರಾಹ್ಣದ ಅವಧಿಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಉಪನಿರ್ದೇಶಕರಾದ ಶ್ರೀಯುತ ಗಣಪತಿಯವರು ಆಗಮಿಸಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯು ಪ್ರಥಮ ಸ್ಥಾನ ಪಡೆಯಲು ಸಂಸ್ಕೃತ ಶಿಕ್ಷಕರ ಪಾತ್ರವೂ ಗಣನೀಯವಾಗಿರುತ್ತದೆ, ಇದೇ ಪ್ರಯತ್ನವನ್ನು ಮುಂದುವರಿಸೋಣ ಎಂದು ಹೇಳಿದರು.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಶ್ರೀಮತಿ ಡಾ.ಎಲ್ಲಮ್ಮ ಇವರು ಉತ್ತಮ ಅಂಕಗಳಿಕೆಯಲ್ಲಿ ಸಂಸ್ಕೃತ ಶಿಕ್ಷಕರ ಕೊಡುಗೆಯನ್ನು ಸ್ಮರಿಸಿದರು. ಡಯಟ್ ಹಿರಿಯ ಉಪನ್ಯಾಸಕರಾಗಿರುವ ಶ್ರೀಯುತ ಗಣೇಶ್ ಭಾಗವತ್ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಂಸ್ಕೃತ ಅಧ್ಯಾಪಕ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆಯಾಗಿದ್ದು,ಅಧ್ಯಕ್ಷರಾಗಿ ಶ್ರೀ ಪ್ರಭಾಕರ್ ಭಟ್,ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮಿ ಹೆಗಡೆ, ಕಾರ್ಯದರ್ಶಿಯಾಗಿ ಶ್ರೀಯುತ ಅಶೋಕ್ ಹೆಗಡೆ, ಕೋಶಾಧಿಕಾರಿಯಾಗಿ ಶ್ರೀಯುತ ರಾಮಚಂದ್ರ ಭಟ್ ಇವರು ಆಯ್ಕೆ ಆಗಿರುತ್ತಾರೆ.
ಕಾರ್ಯಕ್ರಮದ ನಿರೂಪಣೆ ಶ್ರೀಯುತ ನಾರಾಯಣ ಮೂರ್ತಿ, ಸ್ವಾಗತ ಶ್ರೀ ರಾಮಚಂದ್ರ ಭಟ್ಟ, ಧನ್ಯವಾದ ಶ್ರೀ ವೆಂಕಟೇಶ, ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಜಿ ಟಿ ಪ್ರಭಾಕರ್,ಶಂಭು ಭಟ್, ರಾಘವೇಂದ್ರ ರಾವ್ ವೆಂಕಟರಮಣ ಉಪಾಧ್ಯಾಯ ನಿರ್ವಹಿಸಿದರು.