ಕಾರ್ಕಳ :ಆಗಸ್ಟ್ 2:ಅತ್ಯಂತ ಪ್ರಮಾಣಕತೆ ಹಾಗೂ ನಿಯತ್ತಿನಿಂದ ದುಡಿಯುವ ಕಾರ್ಯಕರ್ತರಿದ್ದರೆ ಅದು ಅಶಾ ಕಾರ್ಯಕರ್ತರು. ಇಂದು ಕಡಿಮೆ ವೇತನದಲ್ಲಿ ಅತೀ ಹೆಚ್ಚು ಇಲಾಖೆಯ ಕೆಲಸ ನಿರ್ವಹಿಸುತ್ತಿರುವುದು ಆಶಾ ಕಾರ್ಯಕರ್ತೆಯರು. ಅವರ ಬದುಕು ಜೀವನ ಬಗ್ಗೆ ಸರ್ಕಾರ ಗಮನ ಕೊಟ್ಟು ಅವರ ಬೇಡಿಕೆಯನ್ನು ಪೂರೈಸಿ ಅವರನ್ನು ಸರ್ಕಾರಿ ನೌಕರೆಂದು ಪರಿಗಣಿಸ ಬೇಕು ಎಂದು ಎಐಯುಟಿಯುಸಿ ರಾಜ್ಯಾ ಉಪಾಧ್ಯಕ್ಷ ಕೆವಿ ಭಟ್ ಹೇಳಿದ್ದಾರೆ.
ಅವರು ಶನಿವಾರ ಅನಂತಶಯನ ರೋಟರಿ ಕ್ಲಬ್ ನಲ್ಲಿ ನಡೆದ ಕಾರ್ಕಳ ತಾಲೂಕು ಆಶಾ ಕಾರ್ಯಕರ್ತೆಯರ ಸಮ್ಮೇಳದಲ್ಲಿ ಭಾಗವಹಿಸಿ ಮಾತನಾಡಿ ತಳಮಟ್ಟದಲ್ಲಿ ಸಂಘಟನೆಗಳು ಬಲವಾದ್ದಲ್ಲಿ ನಮ್ಮ ಹೋರಾಟಕ್ಕೆ ಒಂದು ಅರ್ಥ ಸಿಗುತ್ತೆ. 1500 ರೂ ಪ್ರೋತ್ಸಾಹ ಧನ ಸಿಗುತ್ತಿದ್ದ ಅಂಗನವಾಡಿ ಕಾರ್ಯರ್ತರಿಗೆ ಇಂದು ಹೋರಾಟದ ಫಲವಾಗಿ 7000 ರೂ ಸಿಗುವಂತಾಗಿದೆ. ಆಶಾ ಕಾರ್ಯಕರ್ತೆಯರು ಇಂದು ಒತ್ತಡ ದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರ ಹಾಗೂ ಇಲಾಖೆಯ ಪ್ರತಿಯೊಂದು ಯೋಜನೆ, ಸವಲತ್ತುಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಕಾರ್ಯಗಳಲ್ಲಿಯೂ ಹೆಜ್ಜೆ ಹಾಕುತ್ತಿದ್ದಾರೆ. ಇದೆಲ್ಲಾ ಕೆಲಸವನ್ನು ಬರೀ ಕಡಿಮೆ ವೇತನದಲ್ಲಿ ಮಾಡುತ್ತಿರುವ ಅತ್ಯಂತ ಶೋಚನೀಯ. ಸಿಗುವ ಕಡಿಮೆ ವೇತನದಲ್ಲಿ ಮನೆಯ ಜವಾಬ್ದಾರಿ ಹೇಗೆ ನಿಭಾಯಿಸುವುದು ಎಂಬ ಚಿಂತೆ ಅವರಲ್ಲಿ ಕಾಡುತ್ತಿದೆ. ಅಷ್ಟೇ ಅಲ್ಲದೆ ಇಲಾಖೆಗಳು ಹೆಚ್ಚುವರಿ ಕೆಲಸ ನೀಡುವ ಜೊತೆಗೆ ಒತ್ತಡ ಏರುವ ಮೂಲಕ ಅವರಿಂದ ಕೆಲಸವನ್ನು ಮಾಡಿಸಲಾಗುತ್ತಿದೆ. ಇದರಿಂದಾಗಿ ಆಶಾ ಕಾರ್ಯಕರ್ತೆರ ಬದುಕು ದುಸ್ಥಿರವಾಗಿದೆ.
ರಾಜ್ಯ ಸರ್ಕಾರಕ್ಕೆ ನಮ್ಮ ಸಮಸ್ಯೆ ಹಾಗೂ ಬೇಡಿಕೆಯನ್ನು ಸಲ್ಲಿಸಿದರೆ ಕೇಂದ್ರ ಸರ್ಕಾರ ಕಡೆ ತೋರಿಸಲಾಗುತ್ತಿದೆ.ಕೇಂದ್ರ ಸರ್ಕಾರ ರಾಜ್ಯದ ಈ ಬಗ್ಗೆ ಜವಾಬ್ದಾರಿ ನೀಡಿದೆ ಎಂದು ಜಾರಿ ಕೊಳ್ಳುತ್ತಿದೆ. ಈ ನಡುವೆ ನಮ್ಮ ಸಮಸ್ಯೆ ಯಾರ ಬಳಿ ಹೇಳಿ ಕೊಳ್ಳುವುದು ?ಹೇಗೆ ಬಗೆಹರಿಸುವುದು? ಎಂದು ಗೊತ್ತಾಗುತ್ತಿಲ್ಲ. ಇದಕ್ಕೆ ಹೋರಾಟದ ಮೂಲಕವೇ ನಾವು ನಮ್ಮ ಬೇಡಿಕೆಗಳನ್ನು ಪೂರೈಸಿ ಕೊಳ್ಳಬೇಕಾಗಿದೆ.ಎಂದು ಹೇಳಿದರು
ಬೇಡಿಕೆಗಳು :-ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು.ಅಲ್ಲಿಯವರೆಗೆ ಅವರನ್ನು ಕಾರ್ಮಿಕರು ಎಂದು ಪರಿಗಣಿಸಿ ಎಲ್ಲಾ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು.ಆಶಾ ಕಾರ್ಯಕರ್ತೆಯರಿಗೆ ಸಾಮಾಜಿಕಭದ್ರತೆಯನ್ನು ಖಾತ್ರಿಪಡಿಸಬೇಕು.ಸಾರ್ವಜನಿಕ ಆರೋಗ್ಯವನ್ನು ಬಲಪಡಿಸಲು ಅಗತ್ಯವಿರುವಷ್ಟು ಬಜೆಟ್ ಅನ್ನು ಒದಗಿಸಬೇಕು. ಎಂದು ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಷೆ ಸುಹಾಸಿನಿ,ಯಶೋದ ಸ್ವಾಗತಿಸಿದರು.ಸಜಾತ ಬಜಗೋಳಿ ವಂದಿಸಿದರು