ಕಾರ್ಕಳ: ಆಗಸ್ಟ್ 03:ನಿರಂತರ ಯೋಗ ಧ್ಯಾನ ವ್ಯಾಯಾಮ ಸಮತೋಲಿತ ಉತ್ತಮ ಆಹಾರ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ವನ್ನು ಕಾಪಾಡಿಕೊಳ್ಳಲು ಸಹಕಾರಿ ಎಂದು ಮಣಿಪಾಲ ಕೆ ಎಂ ಸಿ ಯ ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾ. ಶಂಕರ್ ಪ್ರಸಾದ್ ಹೇಳಿದರು ಅವರು ಅವರು ಕೆ ಎಂ ಸಿ ಮತ್ತು ಮಾಹೆ ಮಣಿಪಾಲ ಹಾಗೂ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಸಹಯೋಗದೊಂದಿಗೆ ಕಾರ್ಕಳ ಟಿ ಎಂ.ಎ. ಪೈ ರೋಟರಿ ಆಸ್ಪತ್ರೆ ಯಲ್ಲಿ ನಡೆದ ಅಂಗಾಂಗ ದಾನದ ದಿನ ಕಾರ್ಯಕ್ರಮ ದಲ್ಲಿ ಮಾತನಾಡಿ ವ್ಯಕ್ತಿಯ ಜೀವವನ್ನು ಉಳಿಸುವಲ್ಲಿ ಅಂಗಾಗ ದಾನವು ಬಹುಮುಖ್ಯ ಮತ್ತು ಅನೇಕ ವ್ಯಕ್ತಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ವಾಗುತ್ತದೆ ಎಂದರು
ಕಾರ್ಕಳ ರೋಟರಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಕೀರ್ತಿ ನಾಥ ಬಳ್ಳಾಲ್ ಮಾತನಾಡಿ ಗ್ರಾಮೀಣ ಜನರಲ್ಲಿ ಆರೋಗ್ಯದ ಅರಿವು ,ಹಾಗೂ ಅಂಗಾಂಗ ದಾನದ ಅರಿವು ಮೂಡಿಸುವಲ್ಲಿ ಕೆ ಎಂಸಿ ವಿನೂತನ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಡಾ. ಕೀರ್ತಿ ಮಾತನಾಡಿ ಕಾನೂನು ಚೌಕಟ್ಟಿನೊಳಗೆ ಅಂಗಾಂಗ ದಾನ ಮಾಡಲು ಸಾಧ್ಯವಿದೆ. ಒಬ್ಬ ವ್ಯಕ್ತಿ ಮೂತ್ರಜನಕಾಂಗ ಪಿತ್ತಜನಕಾಂಗದ ದಾನ ಮಾಡಬಹುದು ಮೃತಪಟ್ಟ ಬಳಿಕ ದೇಹದ ಭಾಗಗಳನ್ನು ದಾನ ಮಾಡುವ ಬಳಿಕ ಇನ್ನೊಬ್ಬರ ಜೀವಕ್ಕೆ ಬೆಳಕಾಗಹುದಾಗಿದೆ ಎಂದರು.
ಪ್ರಾಧ್ಯಾಪಕ ಡಾ. ರವೀಂದ್ರ ಪ್ರಭು ಮಾತನಾಡಿದರು ಇದೆ ಸಂದರ್ಭದಲ್ಲಿ ಅಂಗಾಗ ದಾನಿ ಭರತ್ ಬಂಗೇರ ಹಾಗೂ ಸುರೇಖ ಬಂಗೇರ ಅವರನ್ನು ಸನ್ಮಾನಿಸಲಾಯಿತು
ಪ್ರಾಧ್ಯಾಪಕ ಡಾ. ದರ್ಶನ್ ರಂಗಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಅನುಷಾ ಕಾರ್ಯಕ್ರಮ ನಿರೂಪಿಸಿದರು.ಧನ್ಯವಾದ ವಿತ್ತರು.