ಹೊಸದಿಲ್ಲಿ: ಆಗಸ್ಟ್ 03:ಸಾಮಾಜಿಕ ಜಾಲತಾಣ ವೇದಿಕೆಗಳಾದ ವಾಟ್ಸ್ಯಾಪ್, ಇನ್ಸ್ಟಾಗ್ರಾಮ್, ಟಿಕ್ ಟಾಕ್ ಮತ್ತು ಯೂಟ್ಯೂಬ್ ಗಳನ್ನು ನಿಷೇಧ ಮಾಡಿ ಭಾರತದ ನೆರೆ ದೇಶ ಬಾಂಗ್ಲಾದೇಶ (Bangladesh) ಆದೇಶಿಸಿದೆ. ಸರ್ಕಾರಿ ಉದ್ಯೋಗಗಳಿಗೆ ಕೋಟಾ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲಾಗಿದೆ.
ದೇಶದಲ್ಲಿ ಜನರು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ಬಾಂಗ್ಲಾ ಸರ್ಕಾರ ನಿಷೇಧಿಸಿದೆ. ಈ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳ ಪ್ರವೇಶವನ್ನು ಬಾಂಗ್ಲಾದೇಶದಾದ್ಯಂತ ಸೀಮಿತ ಮಾಡಲಾಗಿದೆ.
ಈ ವಿಚಾರವನ್ನು ಗ್ಲೋಬಲ್ ಐಸ್ ನ್ಯೂಸ್ ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ವರದಿ ಮಾಡಿದೆ.