ನವದೆಹಲಿ: ಭಾರತದ ಶೂಟರ್ ಮನು ಭಾಕರ್ ಅವರ ಪ್ಯಾರಿಸ್ ಒಲಿಂಪಿಕ್ಸ್ ಅಂತ್ಯವಾಗಿದೆ. ಒಟ್ಟು ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮನು ಎರಡು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ನಲ್ಲಿ ಕಂಚಿನ ಪದಕಕ್ಕೆ ಕೊರೊಳೊಡ್ಡಿ ಮನು, ಆ ಬಳಿಕ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಮತ್ತೊಂದು ಪದಕ ಗೆದ್ದುಕೊಂಡಿದ್ದರು.
ಮನು ಭಾಕರ್ ಮತ್ತು ಹಂಗೇರಿಯನ್ ಶೂಟರ್ ನಡುವಿನ ಎಲಿಮಿನೇಷನ್ಗಾಗಿ ಶೂಟ್ ಆಫ್ ನಂತರ, ಮನು ಶನಿವಾರ (ಆಗಸ್ಟ್ 3) ನಡೆದ 25 ಮೀಟರ್ ಏರ್ ಪಿಸ್ತೂಲ್ ಫೈನಲ್ನಲ್ಲಿ 4 ನೇ ಸ್ಥಾನ ಪಡೆದರು.