ಉಡುಪಿ:ಆಗಸ್ಟ್ 02: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶೂನ್ಯ ಮಾಸದ ವಿಶೇಷ ಸಂತರ್ಪಣೆಯಾಗಿ ಆಟಿಡೊಂಜಿ ದಿನವನ್ನು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ರಮಾನಂದ ಗುರೂಜಿ ಅಪೇಕ್ಷೆಯಂತೆ ಆಚರಿಸಲಾಯಿತು..
ಅನ್ನಸಂತರ್ಪಣೆಗೆ ಹೆಸರುವಾಸಿಯಾದ ಶ್ರೀ ಕ್ಷೇತ್ರದಲ್ಲಿ ಶುಕ್ರವಾರದಂದು ಸರಿ ಸುಮಾರು 700ಕ್ಕೂ ಅಧಿಕ ಭಕ್ತರುಗಳಿಗೆ ಮಹಾಪ್ರಸಾದವಾಗಿ ಆಟಿ ತಿಂಗಳಿನ ವಿಶೇಷ ಖಾದ್ಯವನ್ನು 36ಕ್ಕೂ ಅಧಿಕ ಬಗೆಯಲ್ಲಿ ಬಾಳೆ ಎಲೆಯಲ್ಲಿ ಬಡಿಸಿ ಸಂತರ್ಪಣೆ ನೆರವೇರಿಸಲಾಯಿತು..
ಸಾಂಪ್ರದಾಯಿಕವಾಗಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಕ್ಷೇತ್ರದ ಅನ್ನಪೂರ್ಣ ಭೋಜನಾಲಯದಲ್ಲಿ ಅನ್ನಪೂರ್ಣೆಗೆ ವಂದಿಸಿ ತುದಿ ಬಾಳೆ ಎಲೆಯಲ್ಲಿ ಉಪ್ಪು ಕಣಿಲೆ ಉಪ್ಪಿನಕಾಯಿ, ಎಲೆ ಸೊಪ್ಪು ಕೋಸಂಬರಿ, ಕೆಸುವಿನ ಎಲೆ ಚಟ್ನಿ, ಹುರುಳಿ ಚಟ್ನಿ, ಮಾವಿನಕಾಯಿ ಚಟ್ನಿ, ಪಂಚಪತ್ರೆ ಕಡ್ಲೆ ಪಲ್ಯ, ಹುರುಳಿಕಾಳು ಸೊಪ್ಪು ಪಲ್ಯ, ಪುದಿನ ಕೋಸಂಬರಿ, ಸಾಂಬಾರ ಸೊಪ್ಪು ಚಿತ್ರಾನ್ನ, ಪತ್ರೊಡೆ ಗಶಿ, ಪತ್ರೊಡೆ ಒಗ್ಗರಣೆ, ಪತ್ರೊಡೆ ಕಾಯಿರವೆ, ಅರಶಿನ ಎಲೆ ಗಟ್ಟಿ, ಹಲಸಿನ ಗಟ್ಟಿ, ಮೆಂತ್ಯ ಗಂಜಿ, ತೊಜಂಕ ವಡೆ, ನುಗ್ಗೆ ಸೊಪ್ಪಿನ ಗಟ್ಟಿಬಜ್ಜೆ, ಸಬ್ಬಾಸಿಗೆ ಸೊಪ್ಪಿನ ವಡೆ, ಪುಂಡಿ ಕಡ್ಲೆ ಗಸಿ,ಬೆಳ್ತಿಗೆ ಅನ್ನ ಆರಿದ್ರ ಸೊಪ್ಪಿನ ತಂಬುಳಿ, ತಿಮರೆ ತಂಬುಳಿ, ಹುರುಳಿ ಸಾರು, ಕೆಸುವಿನ ಎಲೆ ದಂಟಿನ ಬೋಳು ಹುಳಿ, ಸೌತೆಕಾಯಿ ಹಲಸಿನ ಬೀಜ ಅಮಟೆಕಾಯಿ ತೆಟ್ಲಾ ಸೇರಿಸಿ ಕೊದ್ದಿಲ್,
ಮಾವಿನ ಕಾಯಿ ಭರತ, ಕಾಯಿ ಹುಳಿ,ಮಜ್ಜಿಗೆ ಹುಳಿ, ಗೆಣಸು ಪಾಯಸ , ಉಂಡುಳ್ಕ, ಮಸಾಲೆ ಮಜ್ಜಿಗೆ…. ಇಂತಹ ವಿವಿಧ ಕಾದ್ಯಗಳಿಂದ ಶಿಸ್ತು ಬದ್ಧವಾಗಿ ರುಚಿಕಟ್ಟಾಗಿ ಮೃಷ್ಟಾನ್ನ ಸಂತರ್ಪಣೆ ನೆರವೇರಿತು…
ಸಂತರ್ಪಣೆಯ ಸಂದರ್ಭದಲ್ಲಿ ನೆರೆದ ಭಕ್ತರುಗಳಿಗೆ ನಿವೃತ್ತ ಉಪನ್ಯಾಸಕಿ ಕೊರಂಗ್ರಪಾಡಿ ಶ್ರೀಮತಿ ಚಂದ್ರಕಲಾ ಶರ್ಮ ಅವರು ಆಟಿಯ ವಿಶೇಷತೆ ಬಗ್ಗೆ ತಿಳಿ ಹೇಳಿದರು..ಶ್ರೀ ನಾಗಶಯನ ಆಟಿಯ ವಿಶೇಷತೆಯನ್ನು ತಿಳಿಸುವ ಹಾಡನ್ನು ಹಾಡಿ ರಂಜಿಸಿದರು..
ಮುಂದಿನ ಪೀಳಿಗೆಗೆ ಮಾದರಿಯಾಗುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ರಚನೆ ಯಾದಂದಿನಿಂದಲೂ ದಲೂ ಕೂಡ ಸಾಂಪ್ರದಾಯಿಕ ಆಚರಣೆಗೆ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು ಅದರಲ್ಲಿ ಆಟಿ ಆಚರಣೆಯು ಒಂದಾಗಿದೆ.. ಆಟಿಯ ಸಂತರ್ಪಣೆಯಲ್ಲಿ ಖಾದ್ಯವನ್ನು ತಯಾರಿಸಲು ಬೇಕಾದ ಸೊಪ್ಪು,ಪತ್ರೆ ಗಳನ್ನು ನೀಡಿ ಸಹಕರಿಸಿದ ಎಲ್ಲರಿಗೂ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ..