ಉಡುಪಿ : ಆಗಸ್ಟ್ 02:ಸುರಿದ ಭಾರೀ ಗಾಳಿ ಮಳೆಗೆ ಶಾಂಭವಿ ನದಿ ಉಕ್ಕಿ ಹರಿಯುತ್ತಿದ್ದು ನದಿ ಭಾಗದ ತಗ್ಗು ಪ್ರದೇಶದ ಗದ್ದೆಗಳಿಗೆ ,ಮನೆಗಳಿಗೆ ನೀರು ನುಗ್ಗಿದೆ .
ಬಜ್ಪೆ ಅತ್ರಾಡಿ ರಾಜ್ಯ ಹೆದ್ದಾರಿಯ ಮುಂಡ್ಕೂರು ಪಡಿತಾರು ಸೇತುವೆ ಜಲಾವೃತವಾಗಿದೆ .
ನದಿ ನೀರು ಸೇತುವೆಯ ಮೇಲ್ಭಾಗದಲ್ಲಿ ಹರಿಯುತ್ತಿದ್ದು ವಾಹನ ಸವಾರರು ರಸ್ತೆದಾಟಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನಾ ಗ್ರಾಮದಲ್ಲಿ ಕುಲ್ತೆ ದಾಸ ಬಾಯಿಲ್ ಪರಿಸರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ .ಶಾಂಭವಿ ನದಿ ತುಂಬಿ ಹರಿದ ಪರಿಣಾಮ ಸಂಕಲಕರಿಯ ಉಗ್ಗೆದಬೆಟ್ಟು ಸಂಪರ್ಕ ಕಡಿತವಾಗಿದೆ.
ಸಂಕಲಕರಿಯ ಅಶೋಕ್ ಶೆಟ್ಟಿ, ಸುರೇಶೆಟ್ಟಿ ಭಾಸ್ಕರ್ ಶೆಟ್ಟಿ ಅವರ ಮನೆಯ ಹಟ್ಟಿ ಮುಳುಗಡೆಯಾಗಿ ಸಾವಿರಾರು ಮಿಕ್ಕಿ ತೆಂಗಿನಕಾಯಿ ನೀರು ಪಾಲಾಗಿದೆ .ಗೊಬ್ಬರದ ಮುಟ್ಟೆ ನೀರಲ್ಲಿ ತೇಲಿ ಹೋಗಿ ಅಪಾರ ನಷ್ಟ ಸಂಭವಿಸಿದೆ .