ಉಡುಪಿ: ಆಗಸ್ಟ್ 02:ನೆರೆ ಪ್ರದೇಶಗಳಿಗೆ ಭೇಟಿ, ಪರಿಶೀಲನೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿನೆ ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಕೆ.ಅಧಿಕಾರಿಗಳಿಗೆ ಸೂಚಿಸಿದರು
ಕುಂದಾಪುರ ತಾಲ್ಲೂಕಿನ ಯೆಯ್ಯಾಡಿ ಮತ್ಯಾಡಿ ಗ್ರಾಮದ ಗುಡ್ಡೆಟ್ಟು ಎಂಬಲ್ಲಿ ನೆರೆ ಪೀಡಿತ ಪ್ರದೇಶ, ಮೊಳಹಳ್ಳಿಯಲ್ಲಿ ನೆರೆ ಪ್ರದೇಶ ಹಾಗೂ ಮನೆ ಹಾನಿ, ಕುಂದಾಪುರ ಪುರಸಭೆ ವ್ಯಾಪ್ತಿಯ ನೆರೆ ಹಾನಿ ಪ್ರದೇಶಗಳಾದ ಒಂಬತ್ತು ದಂಡಿಗೆ, ಖಾರ್ವಿಕೇರಿ ರಿಂಗ್ ರೋಡ್, ಕಾರ್ಕಳ ತಾಲ್ಲೂಕಿ ಮಾಳ ಗ್ರಾಮದಲ್ಲಿ ಗುಡ್ಡೆ ಕುಸಿತ, ಮುಡಾರು ಗ್ರಾಮ ವ್ಯಾಪ್ತಿಯ ಗುಡ್ಡ ಕುಸಿತ, ಕುಂಟಲ್ಪಾಡಿ ನೆರೆ ಪ್ರದೇಶ , ಕುರುವ ಕಂಪಾಂಡ್ ನೆರೆ ಪ್ರದೇಶ, ಪರ್ಪೆಲ್ ಗುಡ್ಡದ ಕೃತಕ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಬಳಿಕ ಮಾಧ್ಯಮ ಜತೆ ಮಾತನಾಡಿ, ಎಲ್ಲ ಇಲಾಖೆಗಳ ವರದಿ ಯಂತೆ ಒಟ್ಟು 167 ಕೋ.ರೂ. ನಷ್ಟ ಆಗಿದ್ದು, ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.ಡಿಸಿ ಖಾತೆಯಲ್ಲಿ ಮಳೆಹಾನಿ ಪರಿಹಾರಕ್ಕೆ 16.5 ಕೋ.ರೂ. ಹಾಗೂ ತಹಶೀಲ್ದಾರ್‌ಗಳ ಖಾತೆಯಲ್ಲಿ 3.5 ಕೋ.ರೂ. ಇದೆ ಎಂದರು.