ವಯನಾಡು :ಆಗಸ್ಟ್ 02:ಕೇರಳದ ವಯನಾಡು ಭೂಕುಸಿತದ ದುರಂತಕ್ಕೆ ನಟಿ ರಶ್ಮಿಕಾ ಮಂದಣ್ಣ ಮನ ಮಿಡಿದಿದ್ದಾರೆ. ಅವರು ಪರಿಹಾರ ಕಾರ್ಯಾಚರಣೆಗೆ, ಸಂತ್ರಸ್ತರಾದವರಿಗೆ ನೆರವಾಗಲು ತಾವು 10 ಲಕ್ಷ ನೆರವು ನೀಡುವುದಾಗಿ ಘೋಷಿಸಿದ್ದಾರೆ
ಕೇವರ ನಾಡಲ್ಲಿ ಹಿಂದೆ ಎಂದೂ ಕಂಡು ಕೇಳಿರದಂತ ಭೂ ಕುಸಿತ ಉಂಟಾಗಿದೆ.ದಿಢೀರ್ ವಯನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತದಲ್ಲಿ ಈವರೆಗೆ 293 ಜನರು ಸಾವನ್ನಪ್ಪಿದ್ದರೇ, 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚುವಂತ ಕಾರ್ಯಾಚರಣೆ ಮುಂದುವರೆದಿದೆ.
ವಯನಾಡಿನಲ್ಲಿ ಸಂಭವಿಸಿದಂತ ಭೂಕುಸಿತ ದುರಂತದಲ್ಲಿ ಸಂತ್ರಸ್ತರಾದಂತವರಿಗೆ, ಬದುಕುಳಿದವರಿಗೆ ನೆರವಾಗುವ ನಿಟ್ಟಿನಲ್ಲಿ ಬಹು ಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು 10 ಲಕ್ಷ ನೆರವು ನೀಡುವುದಾಗಿ ಘೋಷಿಸಿದ್ದಾರೆ.