ಉಡುಪಿ : ಆಗಸ್ಟ್ 01: ತಾಂತ್ರಿಕ ದೋಷದಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಿರಿಯ ವ್ಯಕ್ತಿ ಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಆಗಸ್ಟ್ 01 ರಂದು ಕಲ್ಮಾಡಿಯಲ್ಲಿ ನಡೆದಿದೆ.
ಬಸ್ ಆದಿ ಉಡುಪಿಯಿಂದ ಮಲ್ಪೆಗೆ ತೆರಳುತ್ತಿತ್ತು. ಬ್ರೇಕ್ ವೈಪಲ್ಯ ದಿಂದ ಎದುರಿಗೆ ಬರುತ್ತಿದ್ದ ಸ್ಕೂಟರ್‌ಗೆ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ
ದ್ವಿಚಕ್ರ ವಾಹನ ಸವಾರ, ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ
ತಾಂತ್ರಿಕ ದೋಷದಿಂದ ಎದುರಿಗೆ ಬರುತ್ತಿದ್ದ ಸ್ಕೂಟರ್‌ಗೆ ಬಸ್ ಡಿಕ್ಕಿ ಹೊಡೆದಿದೆ ದ್ವಿಚಕ್ರ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ.