ಮಣಿಪಾಲ, 01 ಆಗಸ್ಟ್ 2024– ಮಣಿಪಾಲದ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ (MCODS),ಮಣಿಪಾಲ ಪ್ರೀಮಿಯಂ ಸಂಜೆ ಕ್ಲಿನಿಕ್ನ ಉದ್ಘಾಟನೆಯನ್ನು ಘೋಷಿಸಲು ಸಂತೋಷವಾಗಿದೆ. ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ವಿ ಎಸ್ ಎಂ (ನಿವೃತ್ತ) ಅವರು ಈ ಕ್ಲಿನಿಕ್ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು, ಇದು ಸ್ಥಳೀಯ ಸಮುದಾಯಕ್ಕೆ ಪ್ರವೇಶಿಸಬಹುದಾದ ದಂತ ಆರೈಕೆಯಲ್ಲಿ ಗಮನಾರ್ಹವಾದ ವರ್ಧನೆಯಾಗಿದೆ.
ಈ ಪ್ರೀಮಿಯಂ ಸಂಜೆ ಕ್ಲಿನಿಕ್ ಅನ್ನು ಉದ್ಘಾಟಿಸಿದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ಈ ಹೊಸ ಸೌಲಭ್ಯದ ಪ್ರಾಮುಖ್ಯತೆಯ ಕುರಿತು ಮಾತನಾಡಿದರು. “ಇದು ಸಾರ್ವಜನಿಕರಿಗೆ ಬಹು ಅವಶ್ಯಕ ಸೌಲಭ್ಯವಾಗಿದೆ. ಪ್ರೀಮಿಯಂ ಸಂಜೆ ಡೆಂಟಲ್ ಕ್ಲಿನಿಕ್ಗಳೊಂದಿಗೆ, ಗುಣಮಟ್ಟದ ದಂತ ಆರೈಕೆಗೆ ಪ್ರವೇಶವು ಈಗ ಸುಲಭವಾಗಿದೆ.
ನಿಯಮಿತ ಕೆಲಸದ ಸಮಯ ಹೊರತುಪಡಿಸಿ ಆಸ್ಪತ್ರೆಗೆ ಭೇಟಿ ನೀಡುವ ವೃತ್ತಿಪರರಿಗೆ , ವಿದ್ಯಾರ್ಥಿಗಳು ಮತ್ತು ಇತರರಿಗೆ ಅನೂಕೂಲವಾಗಲಿದೆ” ಎಂದರು.
ಮಾಹೆ ಮಣಿಪಾಲದ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ ಶರತ್ ಕುಮಾರ್ ರಾವ್ ಅವರು ತ ಮಾತನಾಡಿ, ಈ ಸಂಜೆ ಡೆಂಟಲ್ ಕ್ಲಿನಿಕ್ಗಳು ಎಲ್ಲಾ ಕೆಲಸದ ದಿನಗಳಲ್ಲಿ ಸಂಜೆ 5:00 ರಿಂದ ರಾತ್ರಿ 8:00 ರವರೆಗೆ ಕಾರ್ಯನಿರ್ವಹಿಸಲಿದ್ದು, ವಿಸ್ತೃತ ಸೇವೆಯನ್ನು ಒದಗಿಸುತ್ತದೆ . “, ದಂತ ವೈದ್ಯರು ಸಮಾಲೋಚನೆಗಾಗಿ ಲಭ್ಯವಿರುತ್ತಾರೆ, ಮತ್ತು ದಂತ ಸಂಬಂಧಿತ ಕಾರ್ಯವಿಧಾನಗಳು ಲಭ್ಯವಿದ್ದು, ಸಮುದಾಯದ ದಂತ ಆರೋಗ್ಯ ಅಗತ್ಯಗಳನ್ನು ಪೂರೈಸುತ್ತಾರೆ” ಎಂದರು.
ಸಂಜೆ ಚಿಕಿತ್ಸಾಲಯದಲ್ಲಿ ಬಾಯಿಯ ಆರೋಗ್ಯ ತಪಾಸಣೆ ಮತ್ತು ಆರೈಕೆ ,ಮಕ್ಕಳ ದಂತ ಚಿಕಿತ್ಸೆ , ರೂಟ್ ಕೆನಾಲ್ ಚಿಕಿತ್ಸೆ ಮತ್ತು ಫಿಲ್ಲಿಂಗ್ , ಹಲ್ಲು ಕೀಳುವುದು ಮತ್ತು ಹಲ್ಲಿನ ಶಸ್ತ್ರಚಿಕಿತ್ಸೆ, ಬದಲಿ ಹಲ್ಲು ಜೋಡಣೆ ಹಾಗೂ ಇಂಪ್ಲಾಂಟಾಲಜಿ ಚಿಕಿತ್ಸೆ, ವಕ್ರದಂತ ಚಿಕಿತ್ಸೆ , ಸೌಂದರ್ಯ ದಂತ ವೈದ್ಯ ಕಾರ್ಯವಿಧಾನ ಸೇರಿದಂತೆ ಎಲ್ಲಾ ರೀತಿಯ ದಂತ ಚಿಕಿತ್ಸೆ ಮತ್ತು ಕಾರ್ಯವಿಧಾನಗಳನ್ನು ಮಾಡಲಾಗುವುದು .
ಮಣಿಪಾಲ ದಂತ ವಿಜ್ಞಾನ ಮಹಾ ವಿದ್ಯಾಲಯದ ಡೀನ್ ಡಾ ಮೋನಿಕಾ ಸಿ ಸೊಲೊಮನ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಜೆ ಚಿಕಿತ್ಸಾಲಯದ ಕುರಿತು ಕಿರುನೋಟ ನೀಡಿದರು. ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿ ಓ ಓ ಡಾ ಆನಂದ್ ವೇಣುಗೋಪಾಲ್ ; ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಹಿರಿಯ ದಂತ ವೈದ್ಯರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿ ಮತ್ತು ನಿಮ್ಮ ಭೇಟಿ ಕಾದಿರಿಸಲು ದಯವಿಟ್ಟು 6364234893 ಗೆ ಕರೆ ಮಾಡಿ.