ವಯನಾಡ್ : ಆಗಸ್ಟ್ 01: ದೇವರ ನಾಡಲ್ಲಿ ಭೀಕರ ಭೂಕುಸಿತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ವಯನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತದಲ್ಲಿ ಈವರೆಗೆ 254 ಜನರು ಸಾವನ್ನಪ್ಪಿದ್ದಾರೆ.
192 ಮಂದಿ ನಾಪತ್ತೆಯಾಗಿದ್ದು, ಭೂಕುಸಿತದಲ್ಲಿ ಸಿಲುಕಿದ್ದಂತ 1,592 ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
8 ಸಾವಿರಕ್ಕೂ ಹೆಚ್ಚು ಜನರು ಕಾಳಜಿ ಕೇದ್ರ ಸ್ಥಾಳಂತರಿಸಲಾಗಿದೆ. 3,332 ಪುರುಷರು ಹಾಗೂ 3398 ಮಂದಿ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. 82 ನಿರಾಶ್ರಿತರ ಶಿಬಿರವನ್ನು ತೆರೆಯಲಾಗಿದೆ. 8 ಕ್ಯಾಂಪ್ ಅನ್ನು ಚೋರ್ ಮಂಡಲಾದಲ್ಲಿ ಓಪನ್ ಮಾಡಲಾಗಿದೆ.
ಈವರೆಗೆ 1884 ಮಕ್ಕಳನ್ನು ರಕ್ಷಿಸಲಾಗಿದ್ದು, ಅವರನ್ನು ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಗುಡ್ಡ ಕುಸಿತದಲ್ಲಿ ಸಂತ್ರಸ್ತರಾದಂತವರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವಂತ ವ್ಯವಸ್ಥೆಯನ್ನು ಕೇರಳ ಸರ್ಕಾರ, ಹೊರ ರಾಜ್ಯಗಳು ಮಾಡುತ್ತಿದ್ದಾವೆ.