ಹಾಸನ :ಜುಲೈ 31:ಗುಡ್ಡ ಕುಸಿತದಿಂದ ಬಂದ್ ಆಗಿದ್ದ ಹಾಸನದ ಶಿರಾಡಿಘಾಟ್ನಲ್ಲಿ ಸಂಚಾರ ಆರಂಭವಾಗಿದೆ. ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಬಳಿ ಗುಡ್ಡ ಕುಸಿದಿತ್ತು. ಕೂಡಲೆ ಕಾರ್ಯಪ್ರವೃಹತವಾದ ಜಿಲ್ಲಾಡಳಿತ ಸತತ 10-12 ಗಂಟೆ ಕಾರ್ಯಾಚರಣೆ ನಡೆಸಿ ಮಣ್ಣು ತೆರವು ಮಾಡಿದೆ.
ಇದರಿಂದ ರಸ್ತೆ ಸಂಚರಿಸಲು ಮುಕ್ತವಾಗಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲ ಕೆಸರುಮಯವಾಗಿದೆ. ಟ್ರಕ್ವೊಂದು ಕೆಸರಿನಲ್ಲಿ ಸಿಲುಕಿತ್ತು. ನಿಧಾನಗತಿ ಸಂಚಾರದಿಂದ ರಸ್ತೆಯ ಎರಡೂ ಬದಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ