ಮಣಿಪಾಲ, ಜುಲೈ 29, 2024 – ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಯ ವಿವಿಧ ವಿಭಾಗಗಳಲ್ಲಿ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳಿಗೆ ‘ಮಣಿಪಾಲ ವಿಹಾರ’ ಅಥವಾ ‘ಮಣಿಪಾಲ ಗಮ್ಯ’ [=ಡೆಸ್ಟಿನೇಶನ್ ಮಣಿಪಾಲ್] ಎಂಬ ವಿಶಿಷ್ಟ ‘ಕಾಲೇಜು ಆವರಣ ಪ್ರವಾಸ’ [ಕ್ಯಾಂಪಸ್ ಟೂರ್] ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದು ಮಾಹೆಯ ಕ್ಯಾಂಪಸ್ಸಿನ ಕುರಿತು ಪರಿಚಯಾತ್ಮಕ ಪ್ರವಾಸವಾಗುವುದರ ಜೊತೆಗೆಯೇ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಮಣಿಪಾಲದ ದಿನಚರಿಯನ್ನು ಸನಿಹದಿಂದ ನೋಡುವ ಅವಕಾಶವನ್ನು ಒದಗಿಸುತ್ತಿದೆ.
ಸಾಂಪ್ರದಾಯಿಕ ಕ್ಯಾಂಪಸ್ ಭೇಟಿಗಳಿಗಿಂತ ಭಿನ್ನವಾಗಿ, ಈ ಡೆಸ್ಟಿನೇಶನ್ ಮಣಿಪಾಲದ ಕ್ಯಾಂಪಸ್ ಪ್ರವಾಸಗಳು ತಮ್ಮ ವೈಯಕ್ತಿಕ ಅನುಭವಗಳು ಮತ್ತು ಒಳನೋಟಗಳನ್ನು ಹಂಚಿಕೊಳ್ಳುವ ಪ್ರಸ್ತುತ ವಿದ್ಯಾರ್ಥಿಗಳಿಂದ ಮಾರ್ಗದರ್ಶಿಸಲ್ಪಡುತ್ತವೆ. ಈ ಪೀರ್-ಟು-ಪೀರ್ ವಿಧಾನವು ನಿರೀಕ್ಷಿತ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲು ಮತ್ತು ನಿಜವಾದ ಉತ್ತರಗಳನ್ನು ಪಡೆಯಲು ಅನುಮತಿಸುತ್ತದೆ, ಅವರ ಭವಿಷ್ಯದ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಮಾಡಲು ಅವರಿಗೆ ಸಹಾಯ ಮಾಡುತ್ತದೆ.
ಮಣಿಪಾಲದ ಕ್ಯಾಂಪಸ್ ಬದುಕನ್ನು ಸಂಭ್ರಮಿಸುವಂಥ ‘ಕ್ಯಾಂಪಸ್ ಟೂರ್’ನ್ನು ಆಯೋಜಿಸುವ ಉದ್ದೇಶದ ಬಗ್ಗೆ ಮಾಹೆಯ ಸಹಉಪಕುಲಪತಿಗಳಾದ ಲೆ. ಜ. [ಡಾ. ] ಎಂ. ಡಿ. ಎಂ.ಡಿ. ವೆಂಕಟೇಶ್, ವಿಎಸ್‌ಎಂ (ನಿವೃತ್ತ) ಅವರು ಹೇಳುವುದು ಹೀಗೆ : ‘ನಮ್ಮಕ್ಯಾಂಪಸ್ ಪ್ರವಾಸವು ಕೇವಲ ವೀಕ್ಷಣೆಯ ಚಟುವಟಿಕೆಯಲ್ಲ, ಇಲ್ಲಿನ ಶೈಕ್ಷಣಿಕ ಸಂಸ್ಕೃತಿ, ಸಾಮಾಜಿಕ ಪರಿಸರದ ಜೊತೆಗೆ ವಿದ್ಯಾರ್ಥಿತು ತನ್ನ ಅನುಭವವನ್ನು ಹೆಚ್ಚಿಸಿಕೊಳ್ಳುವ ವಿಶಿಷ್ಟ ಅವಕಾಶವಿದು. ಮಾಹೆಯಲ್ಲಿ ವಿವಿಧ ವಿಭಾಗಗಳಿದ್ದರೂ ಡೆಸ್ಟಿನೇಶನ್ ಮಣಿಪಾಲ್ ಕ್ಯಾಂಪಸ್ ಪ್ರವಾಸ ಕಾರ್ಯಕ್ರಮದ ಮೂಲಕ ವಿಭಾಗ-ವಿಭಾಗಗಳ ನಡುವೆ ಸಂಬಂಧದ ಎಳೆಯನ್ನು ಜೋಡಿಸುವುದು ಈ ಕಾರ್ಯಕ್ರಮದ ಒಂದು ಉದ್ದೇಶ. ಹೊಸದಾಗಿ ಮಾಹೆ ಕ್ಯಾಂಪಸ್‌ಗೆ ಬರುವ ವಿದ್ಯಾರ್ಥಿಗಳು ಅತ್ಯಾಧುನಿಕ ಎಕ್ಸ್‌ಪೀರಿಯನ್ಸ್ ಥಿಯೇಟರ್, ಫುಡ್ ಕೋರ್ಟ್ಸ್, ಮರೇನಾ ಕ್ರೀಡಾ ಸಂಕೀರ್ಣ [ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್], ಸುಸಜ್ಜಿತ ವಿದ್ಯಾರ್ಥಿನಿಲಯಗಳು- ಮುಂತಾದ ಅತ್ಯಾಧುನಿಕ ಸೌಕರ್ಯಗಳನ್ನು ವೀಕ್ಷಿಸಲು ಸಾಧ್ಯವಾಗುವಂಥ ಸಂದರ್ಭವನ್ನು ಇದು ಒದಗಿಸುತ್ತದೆ. ಮಣಿಪಾಲದ ಕ್ಯಾಂಪಸ್‌ನೊಳಗಿನ ಸ್ಪಂದನಶೀಲ ಸಂಸ್ಕೃತಿ ಮತ್ತು ಚೈತನ್ಯಯುತವಾದ ಜೀವನ ಶೈಲಿಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವುದಕ್ಕೆ ಕೂಡ ಇದು ಸಹಕಾರಿ’
‘ಕ್ಯಾಂಪಸ್ ಟೂರ್’ ನಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಪ್ರವಾಸಿ ಮಾರ್ಗದರ್ಶಿಗಳನ್ನಾಗಿ ತರಬೇತಿಗೊಳಿಸುತ್ತಿರುವುದರಿಂದ ಅವರ ಅನುಭವ ವಿಕಸನಕ್ಕೂ ಇಲ್ಲಿ ಅವಕಾಶವಿದೆ. ಡೆಸ್ಟಿನೇಶನ್ ಮಣಿಪಾಲ್ ಉಪಕ್ರಮ [ಇನಿಶಿಯೇಟಿವ್]ವು ವಿದ್ಯಾರ್ಥಿಕೇಂದ್ರಿತವಾದ ಕಾರ್ಯಕ್ರಮವಾಗಿದ್ದು ಮಣಿಪಾಲದ ಬಹುಸಾಂಸ್ಕೃತಿಕ ಪರಿಸರವನ್ನು¬ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತದೆ. ಈ ಮಾರ್ಗದರ್ಶಿಗಳು, ತೊಡಗಿಸಿಕೊಳ್ಳುವ ಮತ್ತು ತಿಳಿವಳಿಕೆ ನೀಡುವ ಪ್ರವಾಸಗಳನ್ನು ತಲುಪಿಸಲು, ಮೌಲ್ಯಯುತವಾದ ಸಂವಹನ ಮತ್ತು ನಾಯಕತ್ವ ಕೌಶಲ್ಯಗಳನ್ನು ಪಡೆಯಲು ತರಬೇತಿ ನೀಡುತ್ತಾರೆ. ಅದರ ವಿಶಿಷ್ಟ ಕೊಡುಗೆ ಮತ್ತು ವಿದ್ಯಾರ್ಥಿ-ಕೇಂದ್ರಿತ ತತ್ತ್ವಶಾಸ್ತ್ರದೊಂದಿಗೆ, ಈ ಉಪಕ್ರಮವು ಬೆಳವಣಿಗೆಗೆ ಸಿದ್ಧವಾಗಿದೆ.
ಈ ಉಪಕ್ರಮವು ಕ್ಯಾಂಪಸ್ ಜೀವನದಲ್ಲಿ ಸಾಟಿಯಿಲ್ಲದ ಒಳನೋಟಗಳನ್ನು ನೀಡುವ ಮೂಲಕ, ಇದು ನಿರೀಕ್ಷಿತ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ನಾವೀನ್ಯತೆ ಮತ್ತು ಬೆಂಬಲದ ದಾರಿದೀಪವಾಗಿ ನಿಲ್ಲಲಿದೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ಪ್ರವಾಸವನ್ನು ಮುಂಗಡ ಕಾದಿರಿಸಲು , https://destination.manipal.edu ಗೆ ಭೇಟಿ ನೀಡಬಹುದು.