ಬೆಳ್ತಂಗಡಿ , ಜುಲೈ .28: ಬೊಲೆರೊ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, 13 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘ ಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೀಟು ಬಳಿ ನಿನ್ನೆ ನಡೆದಿದೆ. ಬೊಲೆರೋ ಚಾಲಕ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದೆ
ಮೃತ ಬಾಲಕಿ ಕಲ್ಮಂಜ ಗ್ರಾಮದ ಕುಡೆಂಚಿ ಗುರುಪ್ರಸಾದ್ ಗೋಖಲೆ ಹಾಗೂ ಗಾನವಿ ಪುತ್ರಿಯಾದ ಅನರ್ಘ್ಯ ಎಂದು ತಿಳಿದುಬಂದಿದೆ ಉಜಿರೆ ಎಸ್‌ಡಿಎಂ ಶಾಲೆಯ ಆರನೇ ತರಗತಿಯಲ್ಲಿ ಓದುತ್ತಿದ್ದರು.
ಬೈಕ್ನಲ್ಲಿ ತೆರಳುತ್ತಿದ್ದಾಗ ಡಿಕ್ಕಿ ಹೊಡೆದ ಬೊಲೆರೊ 30 ಮೀಟರ್ ಎಳೆದುಕೊಂಡು ಹೋಗಿದೆ. ಪರಿಣಾಮ ಸ್ಥಳದಲ್ಲೇ ಅನರ್ಘ್ಯ ಕೊನೆಯುಸಿರೆಳೆದಿದ್ದಾಳೆ.
ಅಪಘಾತ ಬಳಿಕ ಬೊಲೆರೊ ವಾಹನ ಸಮೇತ ಪರಾರಿ ಆಗ್ತಿದ್ದ ನಾಲ್ವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆದರೆ, ಈ ವೇಳೆ ಓರ್ವ ಎಸ್ಕೇಫ್ ಆಗಿದ್ದಾನೆ. ಬೊಲೆರೊ ವಾಹನದಲ್ಲಿ ತೆರಳುತ್ತಿದ್ದ ನಾಲ್ವರೂ ಮದ್ಯ ಸೇವಿಸಿದ್ದು, ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.