ಮಣಿಪಾಲ, ಜುಲೈ 28: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ನ ವಾಣಿಜ್ಯ ವಿಭಾಗ [ಡಿಓಸಿ]ದ ವತಿಯಿಂದ ಬಿಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮವು ಇತ್ತೀಚೆಗೆ ಆಯೋಜನೆಗೊಂಡಿದ್ದು ಬೆಂಗಳೂರಿನ ಅರ್ಬನ್ ಪೈಪರ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ [ಸಿಎಚ್‌ಆರ್‌ಓ] ಡಾ. ನಾಗ ಸಿದ್ಧಾರ್ಥ ಮತ್ತು ಬಿಗ್4ಎಸ್ ನ ಹಿರಿಯ ಮಾನವಸಂಪನ್ಮೂಲ ಅಧಿಕಾರಿ ಜೆಸ್ವಿನ್ ಬೋಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಡಾ. ನಾಗ ಸಿದ್ಧಾರ್ಥ ಅವರು ಮಾತನಾಡಿ, ‘ಉದ್ಯಮದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮತ್ತು ಸಮಾಜದ ಅಭ್ಯುದಯಕ್ಕೆ ನೆರವಾಗುವಲ್ಲಿ ಬಿಬಿಎ ಪ್ರಶಿಕ್ಷಣ [ಬಿಬಿಎ ಪ್ರೋಗ್ರಾಮ್]ವು ಮಹತ್ತ್ದದ್ದಾಗಿದೆ. ಇದು ಕೇವಲ ವ್ಯಾವಹಾರಿಕ ಪದವಿಯಾಗದೇ ಸಾಮೂಹಿಕ ಮನೋಭಾವವನ್ನು ಉತ್ತೇಜಿಸಿ ಉತ್ತಮ ಸಾಮಾಜಿಕನಾಗಿಯೂ ರೂಪಿಸುತ್ತದೆ’ ಎಂದರು ಹಾಗೆಯೇ DOC ಒಂದು ಪ್ರಧಾನ ಸಂಸ್ಥೆಯಾಗಿದೆ ಎಂದು ಹೇಳಿದರು.
ಬಿ. ಕಾಂ. ಪ್ರಶಿಕ್ಷಣ [ಬಿ.ಕಾಂ. ಪ್ರೋಗ್ರಾಮ್]ನ ಮಹತ್ತ್ವವನ್ನು ವಿವರಿಸಿದ ಜೆಸ್ವಿನ್ ಜೋಸ್ ಅವರು, ‘ವೃತ್ತಿಪರರಾಗಿ ಔನ್ನತ್ಯಕ್ಕೆ ಏರಲು ಬಿ.ಕಾಂ. ಪದವಿಯಲ್ಲಿ ಸಾಕಷ್ಟು ಅವಕಾಶಗಳಿವೆ. ಸಮುದಾಯದೊಳಗೆ ಬದುಕುವ ಕಲೆಯನ್ನು ಕಲಿಸುವುದರ ಜೊತೆಗೆ ಸಮಸ್ಯೆಗಳನ್ನು ಬಗೆಹರಿಸುವ ಪಾಠವನ್ನು ಕೂಡ ಇದು ನೀಡುತ್ತದೆ’ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಮಾಹೆಯ ಆಡಳಿತಾತ್ಮಕ, ಮಾನವಿಕ, ಸಮಾಜವಿಜ್ಞಾನ ಮತ್ತು ಕಾನೂನು ವಿಭಾಗ ಸಹ-ಉಪಕುಲಪತಿಯಾಗಿರುವ ಡಾ. ಮಧು ವೀರರಾಘವನ್ ಅವರು ಮಾತನಾಡಿ, ‘ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶೈಕ್ಷಣಿಕ ಪದವಿಗಳ ಪಾತ್ರ ಮಹತ್ತ್ವದ್ದಾಗಿದೆ. ಸವಾಲುಗಳನ್ನು ಎದುರಿಸುವುದು, ಸಂವಹನ ನಡೆಸುವುದು. ಸಾಮೂಹಿಕವಾಗಿ ಕರ್ತವ್ಯ ನಿರ್ವಹಿಸುವುದು, ನಾಯಕತ್ವ ವಹಿಸುವುದು, ಪರಿಸ್ಥಿತಿಗೆ ಹೊಂದಿಕೊಳ್ಳುವುದು ಮುಂತಾದ ಕೌಶಲಗಳನ್ನು ಸಾಧಿಸುವುದು ಪದವಿಶಿಕ್ಷಣದಿಂದ ಸಾಧ್ಯವಿದೆ’ ಎಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಸಂದೀಪ್ ಎಸ್. ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕಳೆದ 17 ವರ್ಷಗಳಿಂದ ವಿಭಾಗವು ಬೆಳೆದು ಬಂದ ಬಗೆಯನ್ನು ವಿವರಿಸಿದರು. ಸಹಮುಖ್ಯಸ್ಥರಾಗಿರುವ ಡಾ. ರಶ್ಮೀ ಯೋಗೇಶ್ ಪೈ ಸ್ವಾಗತಿಸಿದರು. ಬಿಬಿಎಂ ಪದವಿಯ ಸಂಚಾಲಕರಾದ ಡಾ. ಶಿಲ್ಪಾ ಗೋಪಾಲ್, ಬಿಕಾಂ ಪದವಿಯ ಸಂಚಾಲಕರಾದ ಡಾ. ಅಭಿಷೇಕ್ ರಾವ್ ಅವರು ಅತಿಥಿಗಳ ಪರಿಚಯವನ್ನು ನೀಡಿದರು. ವಿದ್ಯಾರ್ಥಿ ನಿರ್ವಹಣೆ ವಿಭಾಗ [ಸ್ಟೂಡೆಂಟ್ ಎಂಗೇಜ್‌ಮೆಂಟ್] ದ ಸಹಾಯಕ ಮುಖ್ಯಸ್ಥ ಡಾ. ಮಾಥ್ಯೂ ಥಾಮಸ್ ಗಿಲ್ ಅವರು ಧನ್ಯವಾದ ಸಮರ್ಪಿಸಿದರು.
ಕೋಮಲ್ ಜೆನ್ನಿಫೆರ್ ಡಿ’ಸೋಜಾ ಮತ್ತು ಪ್ರಿನ್ಸಿಯಾ ನಿಕಿಟಾ ಡಿ’ಸೋಜಾ ಅವರು ಕಾರ್ಯಕ್ರಮ ನಿರ್ವಹಿಸಿದರು.