ಕಾರ್ಕಳ : ಜುಲೈ 27:ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಹೊಸದಾಗಿ ನಿರ್ಮಿಸಿ ಮೇ 12ರಂದು ಗೃಹಪ್ರವೇಶ ಆದ ಆಸಿಯ ಬಾನು ಎಂಬವರ ಮನೆ ಇಂದು ಜುಲೈ 27 ಬೆಳಗಿನ ನಸುಕಿನ ಜಾವ ಸುಮಾರು 3:30ಕ್ಕೆ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಮನೆಯಲ್ಲಿರುವ ವಿದ್ಯುತ್ ಉಪಕರಣಗಳು ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ನಡೆದಿದೆ.
ಸುಮಾರು 30 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಮನೆಗೆ ಈ ಅವಘಡದಿಂದ ಸುಮಾರು ಐದು ಲಕ್ಷದವರೆಗೆ ನಷ್ಟ ಉಂಟಾಗಿದೆ ಎನ್ನಲಾಗಿದೆ
ಅದಲ್ಲದೆ ಅಡುಗೆ ಮನೆಯ ಕಾಂಕ್ರೀಟ್ ಸ್ಲಾಬ್ ಸಂಪೂರ್ಣವಾಗಿ ಬಿರುಕು ಬಿಟ್ಟು ಯಾವುದೇ ಸಂದರ್ಭದಲ್ಲಿ ಕೆಳಗೆ ಬೀಳುವ ಸಾಧ್ಯತೆ ಇದೆ ಎಂದು ಮನೆಯ ಮಾಲಕಿ ಆಸಿಯ ಬಾನು ಮಾಧ್ಯಮದೊಂದಿಗೆ ಹೇಳಿದರು.
ಅಗ್ನಿಶಾಮಕ ದಳದ ಠಾಣ ಅಧಿಕಾರಿ ಆಲ್ಬರ್ಟ್ ಮೊನಿಸ್, ಅಚ್ಯುತ ಕರ್ಕೇರಾ, ಜಯಮೂಲ್ಯ, ನಿತ್ಯಾನಂದ, ಹಾಗೂ ರವಿಚಂದ್ರ ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.