ಗೋಕರ್ಣ:ಜುಲೈ 26: ಶಿರೂರು ಗುಡ್ಡಕುಸಿತದ ಸಂದರ್ಭದಲ್ಲಿ ಗಂಗಾವಳಿ ನದಿ ನೀರು ಅಪ್ಪಳಿಸಿ ಏಳು ಮನೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಸಂತ್ರಸ್ತ ಕುಟುಂಬಗಳಿಗೆ ರಾಮಚಂದ್ರಾಪುರ ಮಠ ಸಹಾಯಹಸ್ತ ಚಾಚಿದೆ.
ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀರಾಘವೇಶ್ವರ ಭಾರತೀಸ್ವಾಮೀಜಿಯವರು ಶ್ರೀಮಠದ ನಿಯೋಗವನ್ನು ಘಟನಾ ಸ್ಥಳಕ್ಕೆ ಅಗತ್ಯ ನೆರವಿನ ವಸ್ತುಗಳೊಂದಿಗೆ ಶ್ರೀಮಠದ ನಿಯೋಗವನ್ನು ಕಳುಹಿಸಿಕೊಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಂಡ, ಸಂತ್ರಸ್ತರಿಗೆ ಸಾಂತ್ವನ ಹೇಳಿ, ನಗದು, ಆಹಾರಧಾನ್ಯದ ಕಿಟ್‌ಗಳನ್ನು ಸಂತ್ರಸ್ತರ ಕುಟುಂಬಗಳಿಗೆ ವಿತರಿಸಿತು.
ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಮತ್ತು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾರ್ಗದರ್ಶನದಲ್ಲಿ ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಪ್ರಾಂತ ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ ನೇತೃತ್ವದಲ್ಲಿ ತಂಡ ಎಲ್ಲ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಜತೆಗೆ ಗಂಜಿ ಕೇಂದ್ರಕ್ಕೂ ಭೇಟಿ ನೀಡಿ ಆಸರೆ ಪಡೆದಿರುವ ೮೩ ಮಂದಿಯ ಊಟೋಪಚಾರಕ್ಕೆ ದಿನಸಿ ವಿತರಿಸಿದರು.
ಗುಡ್ಡ ಕುಸಿದು ಭಾರಿ ಪ್ರಮಾಣದ ಮಣ್ಣು ತುಂಬಿ ಹರಿಯುತ್ತಿದ್ದ ಗಂಗಾವಳಿ ನದಿಗೆ ದಿಢೀರನೇ ಬಿದ್ದ ಹಿನ್ನೆಲೆಯಲ್ಲಿ ನದಿ ನೀರು ಸುಮಾರು ೨೦೦ ಮೀಟರ್ ದೂರದ ಜನವಸತಿ ಮೇಲೆ ಸುನಾಮಿ ಅಲೆಗಳಂತೆ ಅಪ್ಪಳಿಸಿ, ಏಳು ಮನೆಗಳನ್ನು ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಹಾಲಕ್ಕಿ ಜನಾಂಗಕ್ಕೆ ಸೇರಿದ ಈ ಕುಟುಂಬಗಳು ತಮ್ಮ ಸಂಬAಧಿಕರ ಮನೆಯಲ್ಲಿ ಆಸರೆ ಪಡೆದಿದ್ದು, ಎಲ್ಲ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಲಾಯಿತು.
ಘಟನೆ ಬಗ್ಗೆ ರಾಘವೇಶ್ವರಭಾರತೀ ಸ್ವಾಮೀಜಿಯವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಶ್ರೀಗಳು ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವುರಿಂದ ಎಲ್ಲೂ ಹೊರಹೋಗುವಂತಿಲ್ಲ. ಆದರೆ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಿ ನಿಯೋಗವನ್ನು ಕಳುಹಿಸಿಕೊಟ್ಟಿದ್ದಾರೆ. ಸಂತ್ರಸ್ತರು ಸ್ಥೆöರ‍್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ಶ್ರೀಮಠ ಸದಾ ನಿಮ್ಮ ಬೆಂಬಲಕ್ಕಿದೆ ಎಂಬ ಸ್ವಾಮೀಜಿಯವರ ಅಭಯವನ್ನು ಸಂತ್ರಸ್ತರಿಗೆ ತಿಳಿಸಲಾಯಿತು.
ಪ್ರತಿ ಕುಟುಂಬಗಳಿಗೆ ತಕ್ಷಣಕ್ಕೆ ೫ ಸಾವಿರ ರೂಪಾಯಿ ನಗದು, ಅಕ್ಕಿ, ತರಕಾರಿ, ಸಕ್ಕರೆ, ತೊಗರಿಬೇಳೆ, ತೆಂಗಿನಕಾಯಿ, ಶ್ರೀಗಳ ಮಂತ್ರಾಕ್ಷತೆ, ರಾಮದೇವರ ಪ್ರಸಾದ ಇದ್ದ ಕಿಟ್‌ಗಳನ್ನು ವಿತರಿಸಲಾಯಿತು. ಶ್ರೀಮಠದ ನೆರವು ಸ್ವೀಕರಿಸಿದ ಮಂಜುನಾಥ ಹನುಮಂತ ಗೌಡ, ನೀಲಾ ಮುದ್ದುಗೌಡ, ಬೊಮ್ಮ ಅನಂತ ಗೌಡ, ಗಣಪತಿ ಬೊಮ್ಮ ಗೌಡ, ದಾದಾ ತೊಳಸಪ್ಪ ಗೌಡ, ಗೋವಿಂದ ಕೃಷ್ಣ ಗೌಡ, ಮಾದೇಶ ಮೋಹನ ಅಂಬಿಗ ಕೃತಜ್ಞತೆ ಸಲ್ಲಿಸಿ, “ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿದ್ದ ನಮಗೆ ಶ್ರೀಗಳ ಅಭಯದಿಂದ ಧರ‍್ಯ ಬಂದಿದೆ. ಮತ್ತೆ ಬದುಕು ಕಟ್ಟಿಕೊಳ್ಳುವ ಭರವಸೆ ಮೂಡಿದೆ” ಎಂದು ಹೇಳಿದರು.
ಸಂತ್ರಸ್ತರನ್ನು ಗುರುತಿಸುವಲ್ಲಿ ಮತ್ತು ನೆರವನ್ನು ಅರ್ಹರಿಗೆ ತಲುಪಿಸುವಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಮಹೇಶ್ ಶೆಟ್ಟಿ ನೇತೃತ್ವದ ತಂಡ ಸಹಕರಿಸಿತು. ಸಗಡಗೇರಿ ಪಂಚಾಯ್ತಿ ಸದಸ್ಯ ಕೃಷ್ಣಗೌಡ, ಜಗದೀಶ್, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ನಾಗೇಶ್ ಗೌಡ, ಗೋಕರ್ಣ ಗ್ರಾಮಪಂಚಾಯ್ತಿ ಅಧ್ಯಕ್ಷೆ ಸುಮನಾ ಗೌಡ, ಹನೇಹಳ್ಳಿ ಪಂಚಾಯ್ತಿ ಅಧ್ಯಕ್ಷ ಸಣ್ಣುಗೌಡ, ಹಾಲಕ್ಕಿ ಸಮಾಜದ ಮುಖಂಡರಾದ ಶಂಕರಗೌಡ ಹೆಗ್ರೆ, ನಾಗೇಶ್‌ಗೌಡ ಕುಡ್ಲೆ, ಶ್ರೀಮಠದ ಪ್ರತಿನಿಧಿಗಳಾದ ಎಸ್.ವಿ.ಹೆಗಡೆ, ಗೋಪಾಲಕೃಷ್ಣ ಹೆಗಡೆ ಮತ್ತಿತರರು ನಿಯೋಗಲ್ಲಿದ್ದರು.