ಉಡುಪಿ : ಜುಲೈ 26:ಹಿರಿಯಡ್ಕದ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ವಿದುಷಿ ಶ್ರಾವ್ಯ ಹಿರಿಯಡ್ಕ ಇವರು ಬೆಂಗಳೂರು ದೂರದರ್ಶನ ಕೇಂದ್ರದ ಆಯ್ಕೆ ಪ್ರಕ್ರಿಯೆಯಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ “ಬಿ ” ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿತ್ತಾರೆ. ಇವರು ಉಡುಪಿಯ ಪ್ರತಿಷ್ಠಿತ ಹೆಜ್ಜೆ-ಗೆಜ್ಜೆ(ರಿ.) ನೃತ್ಯ ಸಂಸ್ಥೆಯ ನಿರ್ದೇಶಕಿ ನೃತ್ಯ ಸಿಂಧು ವಿದುಷಿ ಶ್ರೀಮತಿ ಯಶಾ ರಾಮಕೃಷ್ಣ ಇವರ ಶಿಷ್ಯೆಯಾಗಿದ್ದು, ಹಿರಿಯಡ್ಕದ ಶ್ರೀಮತಿ ಬಬಿತಾ ಮತ್ತು ಶ್ರೀ ಯಾದವ ದಂಪತಿಗಳ ಪುತ್ರಿಯಾಗಿದ್ದಾರೆ.
ಪ್ರಸ್ತುತ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಇವರು ಹಿರಿಯಡ್ಕದಲ್ಲಿ ತಮ್ಮ ಭರತನಾಟ್ಯ ಸಂಸ್ಥೆಯ ಮೂಲಕ ಮಕ್ಕಳಿಗೆ ನೃತ್ಯವನ್ನು ಕಲಿಸುತ್ತಾ ತಮ್ಮ ಕಲಾ ಸೇವೆಯನ್ನು ಮುಂದುವರಿಸುತ್ತಿದ್ದಾರೆ.