ಮಣಿಪಾಲ, 24 ಜುಲೈ 2024 – ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿರುವ ದೇಶದ ಪ್ರಮುಖ ಫಲವತ್ತತೆ (ಐ ವಿ ಎಫ್ ) ಕೇಂದ್ರಗಳಲ್ಲಿ ಒಂದಾದ ಮಣಿಪಾಲ್ ಅಸಿಸ್ಟೆಡ್ ರಿಪ್ರೊಡಕ್ಷನ್ ಸೆಂಟರ್ (MARC), ಉಡುಪಿಯ ಡಾ ಟಿ ಎಂ ಎ ಪೈ ಆಸ್ಪತ್ರೆಯಲ್ಲಿ 25 ಜುಲೈ 2024 ರಿಂದ ತನ್ನ ಸಮಗ್ರ ಬಂಜೆತನ ನಿವಾರಣೆಯ ಸೇವೆಗಳ ವಿಸ್ತರಣೆಯನ್ನು ಹೆಮ್ಮೆಯಿಂದ ಘೋಷಿಸುತ್ತದೆ. ಈ ವಿಸ್ತರಣೆಯಿಂದಾಗಿ ಉಡುಪಿಯ ಸುತ್ತಮುತ್ತಲಿನ ದಂಪತಿಗಳಿಗೆ ವಿಶ್ವ ದರ್ಜೆಯ ಸಂತಾನೋತ್ಪತ್ತಿ ಆರೋಗ್ಯ ಸೇವೆ ನೀಡುವ ಗುರಿಯನ್ನು ಹೊಂದಿದೆ.
ಹೊಸ ಸೌಲಭ್ಯವು ಪೂರ್ಣ ಶ್ರೇಣಿಯ ಬಂಜೆತನ ರೋಗನಿರ್ಣಯ ಮತ್ತು ಪುರುಷ ಫಲವತ್ತತೆಯ ತಪಾಸಣೆ, ಗರ್ಭಾಶಯದ ಒಳಗಿನ ಗರ್ಭಧಾರಣೆ (IUI), ಇನ್ ವಿಟ್ರೊ ಫಲೀಕರಣ (IVF), ಇಂಟ್ರಾಸೈಟೋಪ್ಲಾಸ್ಮಿಕ್ ವೀರ್ಯ ಇಂಜೆಕ್ಷನ್ (ICSI), ಫಲವತ್ತತೆ ಸಂರಕ್ಷಣೆ ಮತ್ತು ಪೂರ್ವನಿಯೋಜಿತ ಜೆನೆಟಿಕ್ ಪರೀಕ್ಷೆ (PGT) ಯಂತಹ ಚಿಕಿತ್ಸೆಗಳನ್ನು ನೀಡಲಿದೆ . MARC ನಲ್ಲಿ ಸಿಗುವ ಅದೇ ಮಟ್ಟದ ಪರಿಣತಿ ಮತ್ತು ವೈಯಕ್ತಿಕಗೊಳಿಸಿದ ಆರೈಕೆಯಿಂದ ರೋಗಿಗಳು ಪ್ರಯೋಜನ ಪಡೆಯಬಹುದು , ಅವರ ಫಲವತ್ತತೆಯ ಪ್ರಯಾಣದಲ್ಲಿ ನಿರಂತರತೆಯನ್ನು ಖಾತ್ರಿಪಡಿಸಿಕೊಳ್ಳಬಹುದು.
ಡಾ ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತರವರು, ಸೌಲಭ್ಯದ ವಿಸ್ತರಣೆಯ ಕುರಿತು ಪ್ರತಿಕ್ರಿಯಿಸುತ್ತಾ: “ನಮ್ಮ ಆಸ್ಪತ್ರೆಯಲ್ಲಿ ವಿಶೇಷ ಬಂಜೆತನ ನಿವಾರಣೆ ಸೇವೆಯನ್ನು ಒದಗಿಸಲು ನಾವು ಸಂತೋಷಪಡುತ್ತೇವೆ. ಉತ್ತಮ ಗುಣಮಟ್ಟದ ಸಂತಾನೋತ್ಪತ್ತಿ ಆರೋಗ್ಯ ಸೇವೆಯನ್ನು ಹೆಚ್ಚು ದಂಪತಿಗಳಿಗೆ ತಲುಪಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ. MARC ಕೇಂದ್ರವು ಅನುಭವಿ ವೃತ್ತಿಪರರ ತಂಡವನ್ನು ಹೊಂದಿರುತ್ತದೆ, ಇದು ಸಹಾನುಭೂತಿಯೊಂದಿಗೆ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ನೀಡಲು ಮೀಸಲಾಗಿರುತ್ತದೆ” ಎಂದಿದ್ದಾರೆ.
ಆರಂಭದಲ್ಲಿ, ಉಡುಪಿಯ ಹೊಸ ಕೇಂದ್ರವು ಫಲವತ್ತತೆ ತಪಾಸಣೆ ಮತ್ತು ಸಂಜೆಯ ಸಮಯದಲ್ಲಿ ಸಮಾಲೋಚನೆಯನ್ನು ನೀಡಲಿದೆ. ಬಂಜೆತನ ಸಮಸ್ಯೆಗಳ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ನಿರ್ವಹಣೆ ಮತ್ತು ಗರ್ಭಾಶಯದ ಒಳಗಿನ ಗರ್ಭಧಾರಣೆಯ ಕಾರ್ಯವಿಧಾನಗಳು ಲಭ್ಯವಿರುತ್ತವೆ ಮತ್ತು ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಮಣಿಪಾಲದಲ್ಲಿರುವ ಕೇಂದ್ರವು ಚಿಕಿತ್ಸೆ ನೀಡುತ್ತದೆ. ಡಾ ಪ್ರಶಾಂತ್ ಅಡಿಗರವರ ನೇತೃತ್ವದ ಹೆಸರಾಂತ ಫಲವತ್ತತೆ ಚಿಕಿತ್ಸಾ ತಂಡ ಮತ್ತು ಡಾ ಸತೀಶ್ ಅಡಿಗರವರ ನೇತೃತ್ವದ ಭ್ರೂಣಶಾಸ್ತ್ರ ತಂಡ ಉಡುಪಿಯ ಹೊಸ ಕೇಂದ್ರದ ಭಾಗವಾಗಿದೆ.
ಮಣಿಪಾಲ್ ಅಸಿಸ್ಟೆಡ್ ರಿಪ್ರೊಡಕ್ಷನ್ ಸೆಂಟರ್ (MARC) ಬಂಜೆತನ ಆರೈಕೆಯಲ್ಲಿ ಪರಿಣತಿ ಹೊಂದಿರುವ ಪ್ರಮುಖ ಕೇಂದ್ರವಾಗಿದೆ. ಹೆಸರಾಂತ ತಜ್ಞರು ಮತ್ತು ಅತ್ಯಾಧುನಿಕ ಸೌಲಭ್ಯಗಳ ಪರಿಣಿತ ತಂಡದೊಂದಿಗೆ, ಬಂಜೆತನ ಸವಾಲುಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಮತ್ತು ದಂಪತಿಗಳಿಗೆ ವೈಯಕ್ತಿಕ ಹಾಗೂ ಪರಿಣಾಮಕಾರಿ ಚಿಕಿತ್ಸೆಗಳನ್ನು ಒದಗಿಸಲು ಸಮರ್ಪಿತವಾಗಿದೆ. ಶ್ರೇಷ್ಠತೆ ಮತ್ತು ರೋಗಿ-ಕೇಂದ್ರಿತ ಆರೈಕೆಗೆ MARC ನ ಬದ್ಧತೆಯು ನಮ್ಮ ದೇಶದಲ್ಲಿ ಬಂಜೆತನ ನಿರ್ವಹಣೆಯಲ್ಲಿ ವಿಶ್ವಾಸಾರ್ಹ ಹೆಸರನ್ನು ಮಾಡಿದೆ.
ಜುಲೈ 25 ರಂದು ಐವಿಎಫ್ ದಿನವಾಗಿದ್ದು, ಅಂದಿನ ದಿನವೇ ಉಡುಪಿಯ ಅಗತ್ಯವಿರುವ ದಂಪತಿಗಳಿಗೆ ಬಂಜೆತನ ಸೇವೆಗಳನ್ನು ವಿಸ್ತರಿಸಲು ನಾವು ಉದ್ದೇಶಿಸಿದ್ದೇವೆ. ಅಪಾಯಿಂಟ್‌ಮೆಂಟ್ ಹಾಗೂ ಹೆಚ್ಚಿನ ಮಾಹಿತಿಗಾಗಿ 7259032864 ಅನ್ನು ಸಂಪರ್ಕಿಸಲು ಕೋರಲಾಗಿದೆ.