ಉಡುಪಿ :ಜುಲೈ 24:ಉಡುಪಿ ಶ್ರೀ ಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಶುಭ ಆಶೀರ್ವಾದದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಟ್ಲಪಿಂಡಿ ಆಚರಣೆಯ ಶುಭ ದಿನವಾದ ದಿನಾಂಕ: 23/07/2024 ಮಂಗಳವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮುಂದಿನ ತಿಂಗಳು 27 ರಂದು ನಡೆಯುವ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಉಡುಪಿ ತಾಲುಕು ಘಟಕ ಏರ್ಪಡಿಸುವ, “””ಉಡುಪಿ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನದ””” ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು
ಪರ್ಯಾಯ ಶ್ರೀ ಪುತ್ತಿಗೆ ಮಠದ ದಿವಾಣರಾದ ಶ್ರೀ ನಾಗರಾಜ ಆಚಾರ್ಯ ಹಾಗೂ ಶ್ರೀ ಮಠದ ವಿದೇಶ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನ ಆಚಾರ್ಯ, ಹಾಗೂ ಪರ್ಯಾಯ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಶ್ರೀ ರಮೇಶ್ ಭಟ್ ಕೆ, ಇವರ ಉಪಸ್ಥಿತಿಯೊಂದಿಗೆ ಪೂರ್ವಭಾವಿ ಸಭೆಯು ನಡೆಯಿತು,
ಈ ಸಂದರ್ಭದಲ್ಲಿ ಸಮ್ಮೇಳನದ ಸಂಪೂರ್ಣ ಮಾಹಿತಿಯನ್ನು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಇದರ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಅವರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ಸುವರ್ಣ ಕಟಪಾಡಿ ಮಾಹಿತಿ ನೀಡಿದರು,
ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಕರ್ವಾಲ್ ಅವರು ಹಾಗೂ ಉಡುಪಿ ತಾಲುಕು ಅಧ್ಯಕ್ಷರಾದ ಶ್ರೀಮತಿ ಮಾಯಾ ಕಾಮತ್ , ಉಡುಪಿ ತಾಲುಕು ಸಂಚಾಲಕರಾದ ಶ್ರೀಮತಿ ಪ್ರಭಾ ರಾವ್ ಇವರು ಉಪಸ್ಥಿತರಿದ್ದರು