ಉಡುಪಿ: ಜುಲೈ 20:ಬೀಡಿ & ಟೋಬ್ಯಾಕೊ ಲೇಬರ್ ಯೂನಿಯನ್ (ಸಿಐಟಿಯು) ಉಡುಪಿ ಮತ್ತು ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ (ಎಐಟಿಯುಸಿ)ಜಂಟಿಯಾಗಿ ಇಂದು ಉಡುಪಿ ಭಾರತ್ ಬೀಡಿ ಕಂಪನಿಯ ಮುಂದೆ ಏ1,2024ರ ಬಾಕಿ ಇರುವ 22.72ಪೈಸೆ ತುಟ್ಟಿಭತ್ಯೆ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು
ಪ್ರತಿಭಟನೆ ಉದ್ದೇಶಿಸಿ ಎಸ್.ಕೆ.ಬೀಡಿ ಫೆಡರೇಶನ್ ಮಂಗಳೂರು ಇದರ ಕಾರ್ಯದರ್ಶಿ ಸುರೇಶ್ ಮಾತಾನಾಡಿ ಇವತ್ತಿನ ಬೆಲೆ ಏರಿಕೆ ಅನುಗುಣವಾಗಿ ಸರಕಾರ ನಿಗದಿ ಮಾಡಿದ 22.72ಪೈಸೆ ಮಾಲೀಕರು ಕೂಡಲೇ ಕಾರ್ಮಿಕ ರಿಗೆ ನೀಡಬೇಕು. ಇದು ನಿಮ್ಮ ಬಿಕ್ಷೆ ಅಲ್ಲ ಕಾರ್ಮಿಕರ ನಿರಂತರ ಹೋರಾಟ ಫಲ ಅದ್ದರಿಂದ ಕಂಪನಿ ಮಾಲೀಕರು ಕಾರ್ಮಿಕರ ತುಟ್ಟಿಭತ್ಯೆ ಕೂಡಲೇ ಕೊಡಬೇಕು. ಮಂಗಳೂರು ಸಹಾಯಕ ಕಾರ್ಮಿಕ ಅಧಿಕಾರಿ 3ಬಾರಿ ಮಾಲಕರ ಜೊತೆ ಮಾತುಕತೆ ನಡೆಸಲು ಕರೆದಾಗ 2 ಬಾರಿ ತಪ್ಪಿಸಿಕೊಂಡಿದ್ದರು.ಮಾಲಕರ ಈ ನೀತಿ ಸರಿ ಅಲ್ಲ ,ಸರಕಾರ ಕೂಡಲೇ ಮಾಲಿಕರ ಮೇಲೆ ಒತ್ತಡ ತಂದು ಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು
ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತಾಡಿ ಭಾರತ್ ಬೀಡಿ ಮಾಲಿಕರು ಆರಂಭದಲ್ಲಿ 30ರೂ ಬೀಡಿ ಕಂಪನಿಯ ಪ್ರಾರಂಭಿಸಿದರು,ಈಗ ಕೋಟಿ ಗಟ್ಟಲೆ ಲಾಭಾಂಶ ಪಡೆದು ಭಾರತ್ ಕಂಪನಿ ಬೇರೆ ಬೇರೆ ಉದ್ಯಮವನ್ನು ಆರಂಭಿಸಿದೆ.ಅದರಲ್ಲಿ ಭಾರತ್ ಮಾಲ್,ಭಾರತ್ ಕಾರು,ರಿಕ್ಷಾ ಶೋ ರೂಂ,ಸಿನೆಮಾ ಥಿಯೇಟರ್ ಅರಂಬಿಸಿದ್ದಾರೆ.ಅದರೆ ಬಡಾ ಬೀಡಿ ಕಾರ್ಮಿಕರು ಕಷ್ಟ ಪಟ್ಟು ಬೀಡಿ ಕಟ್ಟಿದ ,ತುಟ್ಟಿಭತ್ಯೆ, ಕನಿಷ್ಠ ವೇತನ ನೀಡಲು ಮಾಲೀಕರು ಹಿಂದೇಟು ಹಾಕುತ್ತಿದ್ದರೆ,ಅದ್ದರಿಂದ ನಮ್ಮ ಅವಿಭಜಿತ ದ.ಕ,ಉಡುಪಿ ಜಿಲ್ಲೆಯ ಶಾಸಕರು, ಸಂಸದರು ಸರಕಾರದ ಮೇಲೆ ಒತ್ತಡ ಹೇರಿ ಮಾಲಿಕರಿಗೆ ಇತರ ಹಾಕಬೇಕು ಇಲ್ಲವಾದಲ್ಲಿ ಮುಂದಿನ ದಿನ ಶಾಸಕರು ಮನೆ,ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು
ಎಐಟಿಯುಸಿ ಉಪಾಧ್ಯಕ್ಷ ರಾದ ಶೇಖರ್ ಮಾತಾನಾಡಿ ಇಂದು ಲಕ್ಷಾಂತರ ಬೀಡಿ ಕಾರ್ಮಿಕರು ಇವತ್ತು ಸಾಲಮಾಡಿ ಜೀವನ ಸಾಗಿಸುತ್ತಿದ್ದಾರೆ.ಬೀಡಿ ಕಂಪನಿಯ ಮಾಲಿಕರು ಕಟ್ಟಿದ ಬೀಡಿಯ ವೇತನ, ತುಟ್ಟಿಭತ್ಯೆ ಕೊಡದೇ ಕಂಪನಿಯನ್ನು ಮುಚ್ಚಿ ದರೆ ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾಗುತ್ತಾರೆ.ಕಾರ್ಮಿಕರಿಗೆ ವಂಚನೆ ಮಾಡಿ ತಾವು ಬೆಳೆಯುವುದು ಸರಿಯಲ್ಲ, ಕಾರ್ಮಿಕ ಮಂತ್ರಿಯವರು ಸುಮ್ಮನಿರುವುದು ಸರಿಯಲ್ಲ, ಕೂಡಲೇ ಸರ್ಕಾರದ ಅಧಿಕಾರಿಗಳು ಮಾಲಿಕರ ಮೇಲೆ ಕ್ರಮಕೈಗೊಳ್ಳಬೇಕು.
ಅಖಿಲ ಭಾರತ ಬೀಡಿ ಫೆಡರೇಶನ್ ಕೇಂದ್ರ ಸಮಿತಿ ಸದಸ್ಯರಾದ ಕವಿರಾಜ್. ಎಸ್.ಕಾಂಚನ್ ಮಾತಾಡಿ ಎ.1ರ ತುಟ್ಟಿಭತ್ಯೆ22.72ಪೈಸೆ ನೀಡದೆ 3 ತಿಂಗಳು ಕಳೆದಿವೆ. ಒಬ್ಬ ಬೀಡಿ ಕಾರ್ಮಿಕ ಒಂದು ವಾರದಲ್ಲಿ ಅಂದಾಜು 5000 ಬೀಡಿ ಸುತ್ತಿದರು,ತಿಂಗಳಿಗೆ ಆಗುವ 20,000 ಬೀಡಿಗಳಿಗೆ D.Vಬಾಕಿ 454.40ಪೈಸೆ ಆಗುತ್ತವೆ. 3 ತಿಂಗಳ ಬಾಕಿ ಮೊತ್ತ1363.20ಪೈಸೆ ಆಗುತ್ತದೆ. ಅದರೆ ಕಂಪನಿಯ ಮಾಲಿಕರು ಕಷ್ಟ ಪಟ್ಟು ದುಡಿದ ಕಾರ್ಮಿಕರ ಹಣ ನೀಡದೆ ವಂಚನೆ ಮಾಡಿದ್ದಾರೆ. ಹಾಗೂ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಮಾಲಿಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.ದ.ಕ ಮತ್ತು ಉಡುಪಿ ಜಿಲ್ಲೆಯ 6 ಲಕ್ಷಕ್ಕೂ ಮಿಕ್ಕಿ ಇರುವ ಬೀಡಿ ಕಾರ್ಮಿಕರಿಗೆ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮ ನಿರೂಪಣೆ ಮಾಡಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದಗಳು ನೀಡಿದರು.
ಪ್ರತಿಭಟನ ಸಭೆಯಲ್ಲಿ ಉಡುಪಿ ಬೀಡಿ ಸಂಘದ ಅಧ್ಯಕ್ಷರಾದ ನಳಿನಿ. ಎಸ್,ಕುಂದಾಪುರ ಬೀಡಿ ಸಂಘದ ಕಾರ್ಯದರ್ಶಿ ಬಲ್ಕೀಸ್,ಎಐಟಿಯುಸಿ ಉಡುಪಿ ಮುಖಂಡರಾದ ಶಿವಾನಂದ, ಶಶಿಕಲಾ,ಸುಚಿತ್ರ ಶೆಟ್ಟಿ, ಸಿಐಟಿಯು ಉಡುಪಿ ಮುಖಂಡರಾದ ಮೋಹನ್, ರೀತೇಶ್,ಉಡುಪಿ ಬೀಡಿ ಸಂಘದ ಮುಖಂಡರಾದ ಗಿರಿಜಾ,ವಸಂತಿ,ಜ್ಯೋತಿ, ರತ್ನ,ಲಲಿತ,ವಾರಜ,ಜಾನಕಿ ಉಪಸ್ಥಿತರಿದ್ದರು.