ಉಡುಪಿ :ಜುಲೈ 20:ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜು, ಬಸದಿ ಸ್ವಚ್ಛತಾ ಸಮಿತಿ, ಸ್ಥಳೀಯ ಮಹಿಳಾ ಸಂಘಟನೆ ಧವಳತ್ರಯ ಜೈನ ಕಾಶಿ ಟ್ರಸ್ಟ್, ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಜು 18ರಂದು ಮಧ್ಯಾಹ್ನ 2-30ರಿಂದ 4-30ರ ವರೆಗೆ ‘ಒಪ್ಪಿಕೋ ಪಚ್ಚೆವನಸಿರಿ ಜಾಗೃತಿ ಅಭಿಯಾನ’ ವಿಶೇಷ ಕಾರ್ಯಕ್ರಮ ಜರುಗಿತು.
ವಿನಾಶದಂಚಿನಲ್ಲಿರುವ ಶ್ರೀತಾಳೆ ಗಿಡಗಳನ್ನು ವಿಶೇಷವಾಗಿ ರಚನೆಗೊಂಡ ಕಂಚಿನಪತ್ರ – ಸಿರಿಭೂವಲಯದ ಅಕ್ಷರ ಚಕ್ರ ವಿನ್ಯಾಸದ ಮೇಲೆ ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ಶ್ರೀವಿವೇಕ್ ಆಳ್ವಾ , ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮ್ಯಾನೇಜ್ಮೆಂಟ್ ಟ್ರಸ್ತೀ ಮಾತನಾಡಿ
ಅಭಿವೃದ್ಧಿಯ ಧಾವಂತದಲ್ಲಿ ಟನ್-ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ, ನಿರ್ವಹಣೆ ಬಗ್ಗೆ ಎಚ್ಚರಿಕೆಯಿರಲೆಂದು ಶ್ರೀ ವಿವೇಕ್ ಆಳ್ವಾ ಕರೆ ನೀಡಿದರು.
ಶ್ರೀಪತಿ ಭಟ್ (ಉದ್ಯಮಿಗಳು) ಶ್ರೀ ಚಂದ್ರ ಶೇಖರ್ ಕಾರ್ಯ ನಿರ್ವಹಣಾ ಅಧಿಕಾರಿ,ಯಂ ಸಿ ಸಿ ಬ್ಯಾಂಕ್ ಮೂಡುಬಿದಿರೆ, ಶ್ರೀ ಯುವರಾಜ್ ಜೈನ್, ಶ್ರೀಮತಿ ರಶ್ಮಿತಾ ಯುವ ರಾಜ್ ಎಕ್ಷಲೆಂಟ್ ಕಾಲೇಜು ಪದಾಧಿಕಾರಿಗಳು, ಪ್ರಾಚ್ಯ ಸಂಚಯದ ಅಧ್ಯಕ್ಷರು ಶ್ರೀ ಇಂದ್ರಾಳಿ ಜಯಕರ ಶೆಟ್ಟಿ ಹಾಗೂ ಗೌ. ಅಧ್ಯಕ್ಷರು, ಶ್ರೀ ವಿಶ್ವನಾಥ ಶೆಣೈ (ಸಮಾಜ ಚಿಂತಕರು, ದಾನಿಗಳು) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆಶೀರ್ವಾದ ನೀಡಿ ದ ಮೂಡುಬಿದಿರೆ
ಶ್ರೀ ಜೈನ ಮಠ ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿಗಳು.
ಹಸುರು ಶಿಷ್ಟಾಚಾರದ ಹಿನ್ನೆಲೆಯ ವಿಶಿಷ್ಟ ಕಾರ್ಯಕ್ರಮ: ‘ಕ್ಷಿತಿರೂಹ ನೋಂಪಿ’ (ಒಪ್ಪಿಕೋ ಪಚ್ಚೆವನಸಿರಿ ಜಾಗೃತಿ) ಗಿಡ ನೆಡಿ, ಪೋಷಿಸಲು ಮರೆಯಬೇಡಿ, ಆ ಬಳಿಕ ಗಳಿಸಿದ ಒಂದಂಶ ದಾನಮಾಡಿ ಎಂದರು
ಹಸುರು ಬೆಳೆಸೋಣ ವಿನಾಶ ದ ಅಂಚಿನಲ್ಲಿರುವ ಶ್ರೀ ತಾಳೆ ವೃಕ್ಷ ಮೊದಲಾದ ಬೀಜ ಬಿತ್ತಿ ಗಿಡ ಪೋಷಿಸಿ ಬೆಳೆಸೋಣ ಹಸುರು ಉಳಿಸೋಣ ಎಂಬ ಪ್ರತಿಜ್ಞಾ ವಿಧಿ ಯನ್ನು ನೆರೆದ ಎಲ್ಲಾ ರಿಗೂ ಭೋದಿಸಿದರು
ಶಿಖರೋಪನ್ಯಾಸ ನೀಡಿದ ಪ್ರೊ.ಎಸ್.ಎ.ಕೃಷ್ಣಯ್ಯ ಶಾಸನದನ್ವಯ ಈಗ್ಗೆ ಸುಮಾರು 834 ವರ್ಷಗಳ ಜಿನ ಶಾಸನದ ಹೆಣ್ಣುಮಗಳು ಸಿರಿದೇವಿ (18-ಜುಲೈ ಕ್ರಿ.ಶ.1190)ರಲ್ಲಿ ವಿಜಯಪುರ ಹಿರೇಬೇವಿನೂರು ‘ಕ್ಷಿತಿರೂಹ’ ನೋಂಪಿ ಆಚರಣೆ -ಗಿಡ-ಮರಗಳನ್ನು ದಾನ ನೀಡುವ -ಪಡೆದುಕೊಳ್ಳುವ (ಒಪ್ಪಿಕೋ ವನಸಿರಿ) ಮಹತ್ವವನ್ನು ಸವಿವರವಾಗಿ ತಿಳಿಸಿದರು. ಇದರಿಂದ ಪ್ರೇರಣೆ ಪಡೆದು ವಿನಾಶದಂಚಿನಲ್ಲಿರುವ ಅರುವತ್ತ ನಾಲ್ಕು ವರುಷಗಳಿಗೊಮ್ಮೆ ಹೂಬಿಟ್ಟು-ಕಾಯಿಗಳಾಗಿ ಧರೆಗುರುಳುವ ಶ್ರೀತಾಳೆಗಿಡಗಳನ್ನು ಒಂದು ಲಕ್ಷಕ್ಕೂ ಮಿಗಿಲಾಗಿ ಮೂಡು ಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿಗಳ ಸಹಕಾರದಿಂದ, ಕಾವೇರಿಯಿಂದ ವಾರಣಾಸಿ ತನಕ, ಶ್ರೀಲಂಕಾದವರೆಗೂ ಪ್ರಸಾರ ಮಾಡಿದ್ದಾಗಿದೆ ಎಂದು ಶ್ರೀಕೃಷ್ಣಯ್ಯ ಇವರು ಐತಿಹಾಸಿಕ ಮಾಹಿತಿಗಳನ್ನು ನೀಡಿದರು. ತತ್ಸಂಬಂಧ ನಾಡು-ಕಾಡು ಸೇರುವಲ್ಲಿ ರಾಜ್ಯದಾದ್ಯಂತ ಹಸುರು ಕಣಜ ನಿರ್ಮಾಣವಾಗಬೇಕು, ಮಿಲಿಯಗಟ್ಟಲೆ ಎಲ್ಲತರದ ಮರ-ಗಿಡ ಬೀಜಗಳು/ಕಾಯಿಗಳು ಸಂಗ್ರಹವಾದ ಬಳಿಕ ಜನ ಸ್ವ-ಇಚ್ಚೆಯಿಂದ ತನಗೆ ಬೇಕಾದಷ್ಟು ಪಡೆದು ಕಾಡು ಪ್ರದೇಶಕ್ಕೆ ಶೇಕಡ ಅರುವತ್ತ ರಷ್ಟು, ನಾಡು ಪ್ರದೇಶಕ್ಕೆ ಶೇಕಡ ನಲ್ವತ್ತ ರಸ್ಟು ಪ್ರಸಾರಣವಾಗಬೇಕು. ಹೀಗೆ ಹಸುರು ಕಣಜದ ಸ್ಥಾಪನೆ ಚಾಲನೆಗೆ ಬಂದಿದ್ದೇ ಆದರೆ ನಮ್ಮೆಲ್ಲರ ಆಶಯದಂತೆ ‘ಹಸುರು ಹೊನ್ನ ಬಿತ್ತೋಣ ಜಗದಗಲ’ ಎಂಬ ಸಂದೇಶ ಅನುಷ್ಠಾನಗೊಳ್ಳುವುದರಲ್ಲಿ ಸಂಶಯವಿಲ್ಲ. ಹಸುರು, ಹಸಿವು, ಅಕ್ಷರ ಪ್ರತೀಕವೆನಿಸಿದ ಈ ಸಸ್ಯ ಸಂಪತ್ತು ಪೋಷಿಸುತ್ತಿರುವ, ರಕ್ಷಣೆ ನೀಡುತ್ತಿರುವ ಪರಿಸರ ಚಿಂತಕರು, ಸಂತತಿ ಸಾವಿರವಾಗಲಿ,
ಕಾಡು ಶ್ರೀತಾಳೆ ಓಲೆಗರಿಗಳಿಂದ ನಿರ್ಮಿತ ಐದು”ಗೊರಬು “ಗಳನ್ನು [ಮಳೆಗಾಲದ ರಕ್ಷಣಾ ಪರಿಕರ) ವೇದಿಕೆಯ ಅತಿಥಿಗಳಿಗೆ ನೀಡುವ ಮೂಲಕ ಕೃಷ್ಣಯ್ಯ ಸಸ್ಯಸಂಪದದ ಅನನ್ಯತೆಯನ್ನು ಪರಿಚಯಿಸಿದರು. ನಾರು ಬೇರಿನಿಂದ ತಯಾರಿಸಿದ ” ಕಿರು ಕಣಜ ” (Bio-trove) ದಲ್ಲಿ ಶ್ರೀತಾಳೆ ಬೀಜಗಳು ಇರಿಸಿ ಪಾವನ ಸಾನಿಧ್ಯ ಸ್ವಾಮೀಜಿಗಳಿಗೆ ಅರ್ಪಿ ಸಿದರು
ಇದೇ ಸಂದರ್ಭದಲ್ಲಿ ನಾಡವೈದ್ಯರುಗಳಾದ ಅನಂತಾಡಿಯ ಶ್ರೀಗಂಗಾಧರ ಕರಿಯ ಪಂಡಿತ ಹಾಗೂ ಉಡುಪಿ-ಕಟಪಾಡಿಯ ಪ್ರಾಚ್ಯ ವೈದ್ಯ ಸತೀಶ್ ಮುದ್ದು ಶೆಟ್ಟಿಗಾರ್ ಇವರುಗಳನ್ನು ತಲಾ 10,000 ನಗದು -ಫಲಕ ‘ಪ್ರಾಚ್ಯ ಪಚ್ಚೆವನಸಿರಿ ವೈದ್ಯರತ್ನ’ -ಬಿರುದಿನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ಕೌಟ್ಸ್-ಗೈಡ್ ಆಯುಕ್ತರೂ, ತುಳುಕೂಟ, ಪ್ರಾಚ್ಯ ಸಂಚಯ ಅಧ್ಯಕ್ಷರಾದ ಶ್ರೀ ಇಂದ್ರಾಳಿ ಜಯಕರಶೆಟ್ಟಿ, ಗೌರವ ಅಧ್ಯಕ್ಷರು ಶ್ರೀವಿಶ್ವನಾಥ ಶೆಣೈ ಇವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಅಬ್ಬರದ ಮಳೆಯನ್ನು ಲೆಕ್ಕಿಸದೆ ಪಾಲ್ಗೊಂಡ ಶೃತೇಶ್ ಆಚಾರ್ಯ, ರಾಜೇಶ್ ಉಪಾದ್ಯಾಯ, ರಾಘವೇಂದ್ರ ಅಮೀನ್, ಗಂಗಾಧರ ಕಿದಿಯೂರ್, ಪ್ರಭಾಕರ್, ಸರಳೇಬೆಟ್ಟು ಗಣೇಶ್ ರಾಜ್ ಪಾಲ್ಗೊಂಡಿದ್ದರು.
ಪ್ರಾರ್ಥನೆ, ಕಾರ್ಯಕ್ರಮ ನಿರ್ವಹಣೆ ಧನ್ಯವಾದ ಸಮರ್ಪಣೆ ಸ್ವಸ್ತಿಶ್ರೀ ಕಾಲೇಜು ಪ್ರಾಂಶುಪಾಲ ರಾದ ಶ್ರೀಮತಿ ಸೌಮ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಯುವರಾಜ್ ಜೈನ್ ಬೆಳುವಾಯಿ ಶ್ರೇಯಾoಶ, ಪ್ರವೀಣ್ ಚಂದ್ರ ಉಪಸ್ಥಿತರಿದ್ದರು.