ಉಡುಪಿ :ಜುಲೈ 20:ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದಾಗ ಜು.10ರಂದು ಬೆಳಗ್ಗೆ ಮೂನಿಡಂಬೂರು ಗ್ರಾಮದ ಗಣೇಶ್ ಭಂಡಾರಿ (58) ಅವರು ಮನೆಯ ಹತ್ತಿರದ ಮನೆಯ ಹಿಂಬದಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಬಿದ್ದಿದ್ದು, ಕುತ್ತಿಗೆಯು ಸಿಮೆಂಟ್ ಕಟ್ಟೆಗೆ ತಾಗಿ ತೀವ್ರ ಅಸ್ವಸ್ಥರಾಗಿದ್ದರು.
ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸಗೆ ದಾಖಲಿಸಲಾಗಿತ್ತು. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಕುಟುಂಬವು ಗಣೇಶ್ ಅವರನ್ನುಅನಂತರ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಜು.18ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.