ಬೆಂಗಳೂರು : ಜುಲೈ 19:ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಸುಮಧುರಗೊಳಿಸಲು ಇದೀಗ ತನ್ನ ಅಧಿಕೃತ “ಏರ್‌ಪೋರ್ಟ್ ಗೀತೆ”ಯನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಿಡುಗಡೆ ಮಾಡಿದೆ.
ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ‘ರಿಕಿ ಕೇಜ್’ ಅವರು ಸಂಯೋಜಿಸಿದ ಡೈನಾಮಿಕ್ ದ್ವಿಭಾಷಾ ಟ್ರ್ಯಾಕ್ನನ್ನು ವಿಮಾನ ನಿಲ್ದಾಣ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಥಮ ಪ್ರದರ್ಶನಗೊಂಡಿತು
ಈ ಗೀತೆಯು ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಲೋನಿಪಾರ್ಕ್ ಮತ್ತು ಕನ್ನಡದ ಗಾಯಕ ಸಿದ್ಧಾರ್ಥ ಬೆಳ್ಮಣ್ಣು ಅವರ ಸುಮಧುರ ಕಂಠದಿಂದ ಮೂಡಿಬಂದಿದ್ದು, ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಮಿಶ್ರಣದಲ್ಲಿ ಈ ಗೀತೆ ಹೊರಹೊಮ್ಮಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ, ಈ ಗೀತೆಯ ಪ್ರಥಮ ಪ್ರದರ್ಶನಗೊಂಡು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿತು. ಈ ಮೂಲಕ ಮರೆಯಲಾಗದ ಸಂಗೀತ ಅನುಭವಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು
ಪ್ರಸ್ತುತ ಈ ಗೀತೆಯು ಸ್ಪೂಟಿಫೈ, ಆಪಲ್ ಮ್ಯೂಸಿಕ್, ಅಮೆಜಾನ್ ಮ್ಯೂಸಿಕ್, ವಿಂಕ್ ಮತ್ತು ಇತರ ಮ್ಯೂಸಿಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಪ್ರಯಾಣಿಕರು ತಾವು ಹೋದಲ್ಲೆಲ್ಲಾ ಬೆಂಗಳೂರು ವಿಮಾನ ನಿಲ್ದಾಣದ ರೋಮಾಂಚಕ ಅನುಭವವನ್ನು ತಮ್ಮೊಂದಿಗೆ ಕೊಂಡೊಯ್ಯಬಹುದು. ಈ ಸುಮಧುರ ಗೀತೆಯು ವಿಡಿಯೋದೊಂದಿಗೆ ಮೂಡಿಬಂದಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ಪ್ರಯಾಣ ಪ್ರಾರಂಭಿಸುವ ಪ್ರಯಾಣಿಕರ ಮೂರು ಭಾವನಾತ್ಮಕ ಕಥೆಗಳನ್ನು ಒಳಗೊಂಡಿದೆ.
ಈ ಗೀತೆಯ ವಿಡಿಯೋದಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣ ಪ್ರಾರಂಭಿಸುವ ಪೂರ್ವದಲ್ಲಿ ತಮ್ಮ ಉತ್ಸಾಹ ಹಾಗೂ ನಿರೀಕ್ಷೆಯಲ್ಲಿ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಭಾವನಾತ್ಮಕ ದೃಶ್ಯಾವಳಿಗಳು ಒಳಗೊಂಡಿದೆ. ಇದು ವಿಮಾನ ನಿಲ್ದಾಣದ ಪ್ರಯಾಣಿಕರ ಸೌಕರ್ಯ ಮತ್ತು ತೃಪ್ತಿಗೆ ಅಚಲವಾದ ಸಮರ್ಪಣೆಯನ್ನು ತೋರುತ್ತದೆ. ಅತ್ಯಾಧುನಿಕ ಸೌಲಭ್ಯಗಳಿಂದ ಹಿಡಿದು ಎಲ್ಲಾ ಪ್ರಯಾಣಿಕರಿಗೆ ಅನುಗುಣವಾಗಿ ಚಿಂತನಶೀಲ ಸೇವೆಗಳು, ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವುದು ಸೇರಿದಂತೆ, ವಿಮಾನ ನಿಲ್ದಾಣದ ಅನುಭವದ ಪ್ರತಿಯೊಂದು ಅಂಶವು ಪ್ರಯಾಣಿಕರ ಪ್ರಯಾಣವನ್ನು ಉನ್ನತೀಕರಿಸಲು ವಿನ್ಯಾಸಗೊಳಿಸಲಾಗಿದೆ.