ಉಡುಪಿ: ಸಗ್ರಿ ರೈಲು ಸೇತುವೆ ಸಮೀಪದ ರೈಲು ಹಳಿಯ ಬಳಿ ವ್ಯಕ್ತಿಯೊಬ್ಬರ ಮೃತದೇಹ ಬುಧವಾರ ತಡರಾತ್ರಿ ಪತ್ತೆಯಾಗಿದೆ.
ಮೃತವ್ಯಕ್ತಿಯನ್ನು ಉಡುಪಿ ಮೂಡಬೆಟ್ಟು ನಿವಾಸಿ ಪ್ರಸಾದ್ ಆಚಾರ್ಯ ಎಂದು ಗುರುತಿಸಲಾಗಿದೆ.
ವ್ಯಕ್ತಿಯ ತಲೆ ಭಾಗ ಛಿದ್ರಗೊಂಡಿದ್ದು, ರೈಲು ಬಡಿದು ಅಥವಾ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಆಧಾರ್ ಚೀಟಿ ಪತ್ತೆಯಾಗಿದೆ. ಸ್ಥಳಕ್ಕೆ ಧಾವಿಸಿ ಬಂದ ಮಣಿಪಾಲ ಠಾಣೆಯ ಎಸ್ ಐ ರಾಘವೇಂದ್ರ ಸಿ ಮತ್ತು ಅವರ ತಂಡ ಮಹಜರು ಪ್ರಕ್ರಿಯೆ ನಡೆಸಿದರು.
ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ ಮೃತದೇಹವನ್ನು ಮಣಿಪಾಲದ ಶವಗಾರಕ್ಕೆ ರವಾನಿಸಲಾಯಿತು. ಮಣಿಪಾಲ ಪೋಲಿಸರು ಮತ್ತು ರೈಲ್ವೆ ಪೋಲಿಸರು ಕಾನೂನು ಪ್ರಕ್ರಿಯೆ ನಡೆಸಿದರು