ಬೈಂದೂರು:ಜುಲೈ 17:ನಿರಂತರ ಮಳೆ ಬೈಂದೂರಿನ ಪಡುವರಿ ಗ್ರಾಮದ ಸೊಮೇಶ್ವರ ಬಳಿ ಬಾರಿ ಅವಘಡದ ಮುನ್ಸೂಚನೆ ನೀಡುತ್ತಿದೆ. ಗುಡ್ಡ ಅಪಾರ ಪ್ರಮಾಣದ ಮಣ್ಣು ರಸ್ತೆಗೆ ಕುಸಿಯುತ್ತಿದೆ.ನೀರಿನ ಅಬ್ಬರದ ಪರಿಣಾಮ ರಸ್ತೆಯಂಚಿನ ಮಣ್ಣು ಚರಂಡಿ ಹಾಗೂ ಸೊಮೇಶ್ವರ ದೊಂಬೆ ರಸ್ತೆಗೆ ಹರಿಯುತ್ತಿದ್ದು ಯಾವುದೆ ಕ್ಷಣದಲ್ಲೂ ಕುಸಿಯುವ ಸಾದ್ಯತೆ ಇದೆ.ಒಂದೊಮ್ಮೆ ಕಸಿದರೆ ಬಾರಿ ಅಪಾಯ ಉಂಟಾಗುವ ಸಾದ್ಯತೆ ಹೆಚ್ಚಾಗಿದೆ
ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಬೈಂದೂರಿನ ವಿವಿಧ ಭಾಗದಲ್ಲಿ ಅಪಾರ ಹಾನಿಯಾಗಿದೆ.ಮಾತ್ರವಲ್ಲದೆ ಒತ್ತಿನೆಣೆ ಗುಡ್ಡ ಕೂಡ ಜರ್ಜರಿತವಾಗಿದೆ.ಹೆದ್ದಾರಿ ಪ್ರಾಧಿಕಾರ ಒಂದಿಷ್ಟು ಮುಂಜಾಗ್ರತೆ ವಹಿಸಿದೆ.
ಆದರೆ ದೊಂಬೆ ರಸ್ತೆಯಲ್ಲಿರುವ ಸೊಮೇಶ್ವರ ಗುಡ್ಡ ಅಪಾಯಕ್ಕೆ ಆಹ್ವಾನ ನೀಡಿದೆ.ಶೇಡಿ ಮಣ್ಣಿನ ಈ ಗುಡ್ಡದಲ್ಲಿ ರಸ್ತೆ ನಿರ್ಮಿಸುವಾಗ ಬದಿಗಳನ್ನು ಕಟ್ಟಿಲ್ಲವಾಗಿದೆ ಇದರಿಂದ ಮಳೆಯಲ್ಲಿ ಗಡ್ಡದ ತಳಪಾಯ ಕೊಚ್ಚಿಹೊಗಿದ್ದು ಮಣ್ಣು ಕುಸಿಯುತ್ತಿದೆ.ಮಳೆ ಮುಂದುವರಿದರೆ ಗುಡ್ಡ ಕುಸಿಯುವ ಸಾದ್ಯತೆ ಇದೆ, ನಿತ್ಯ ಶಾಲಾ ವಾಹನ ಸೇರಿದಂತೆ ಹತ್ತಾರು ವಾಹನ ಇದೇ ರಸ್ತೆಯಲ್ಲಿ ಚಲಿಸುತ್ತದೆ
ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಕಂದಾಯ ಇಲಾಖೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ದೀಪಕ್,ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ ಕುಮಾರ್,ಉಪ ವಲಯ ಅರಣ್ಯಾಧಿಕಾರಿ ಹರ್ಷ ವಿ,ಬೈಂದೂರು ವೃತ್ತ ನಿರೀಕ್ಷಕ ಸವಿತ್ರ ತೇಜ್,ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್,ಸ್ತು ಅರಣ್ಯ ಪಾಲಕರಾದ ಶಂಕರ ಡಿ.ಎಲ್,ಮಂಜುನಾಥ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು