ಕುಂದಾಪುರ:ಜುಲೈ 17:ನಿನ್ನೆ ಜುಲೈ 16ರ ಮಧ್ಯಾಹ್ನ ಸುಮಾರು 12.45 ಕ್ಕೇ ಕುಂದಾಪುರದ ಕಾಳಾವರ ಮೂಲದ ಜನತಾ ಕಾಲೋನಿ ನಿವಾಸಿ ಹರೀಶ್ ಕಾಳಾವರ(40) ಎನ್ನುವ ವ್ಯಕ್ತಿಯು ಕಂಡೂರು ಸೇತುವೇಯಿಂದ ಹಾರಿದ ಘಟನೆ ನಡೆದಿದೆ.ಅವರ ಶೋಧ ಕಾರ್ಯ ರಾತ್ರಿಯವರೆಗೆ ನಡೆದಿದೆ.
ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಹರೀಶ್ ಸುಮಾರು 13 ವರ್ಷ ಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇತ್ತಿಚಿನ ದಿನಗಳಲ್ಲಿ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಜು.16ರಂದು ಹರೀಶ್‌ನ ವಿರುದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಪತ್ನಿ ದೂರು ಅರ್ಜಿ ಕೊಟ್ಟಿದ್ದರಿಂದ ಪೊಲೀಸರು ಮಗನನ್ನು ಕರೆದುಕೊಂಡು ಬರುವಂತೆ ಹೇಳಿದ್ದರು. ಅದರಂತೆ ಮಗ ಹರೀಶ್, ಮಗಳೊಂದಿಗೆ ಠಾಣೆಗೆ ಬಂದಿದ್ದು ದಂಪತಿಗಳಿಗೆ ಪೊಲೀಸರು ಬುದ್ದಿ ಮಾತನ್ನು ಹೇಳಿ ಮುಂದಕ್ಕೆ ಒಳ್ಳೆಯ ರೀತಿಯಲ್ಲಿ ಜೀವನ ನಡೆಸುವಂತೆ ತಿಳುವಳಿಕೆ ಹೇಳಿ ಕಳುಹಿಸಿಕೊಟ್ಟಿದ್ದರು.
ತಾವು ಬಾಡಿಗೆ ಮಾಡಿಕೊಂಡು ಬಂದ ಆಟೋ ರಿಕ್ಷಾದಲ್ಲಿ ತನ್ನ ಮಗ ಹರೀಶ್, ಸೊಸೆ, ಮಗಳು ಹೊರಟಿದ್ದು ಆಟೋ ರಿಕ್ಷಾವು ಕಂಡ್ಲೂರು ಸೇತುವೆಯ ಮೇಲೆ ಸಂಚರಿಸುತ್ತಿರುವಾಗ ಮಗ ಹರೀಶ್‌ನು ರಿಕ್ಷಾ ಚಾಲಕನಲ್ಲಿ ನಿಲ್ಲಿಸುವಂತೆ ಹೇಳಿದ್ದು ಆಟೋ ವೇಗ ಕಡಿಮೆ ಮಾಡಿದಾಗ ಹರೀಶ್‌ನು ಒಮ್ಮೇಲೆ ರಿಕ್ಷಾದಿಂದ ಕೆಳಕ್ಕೆ ಇಳಿದು ಸೇತುವೆಯ ತಡೆಬೇಲಿಯನ್ನು ಹಾರಿ ಕಂಡ್ಲೂರು ವಾರಾಹಿ ನದಿಗೆ ದುಮುಕಿದ್ದು ಹೊಳೆಯ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಮಗ ಹರೀಶ್‌ನನ್ನು ಪತ್ತೆ ಹಚ್ಚಿಕೊಡಬೇಕೆಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ನೀರಿನಲ್ಲಿ ಹಾರಿ ಕಾಣೆಯಾದ ಹರೀಶ್ ಅವರ ಹುಡುಕಾಟಕ್ಕೆ ಪೊಲೀಸರು, ಅಗ್ನಿಶಾಮಕ, ಸ್ಥಳೀಯರು, ಮೀನುಗಾರರು ವ್ಯಾಪಕಶೋಧ ನಡೆಸಿದ್ದಾರೆ. ಭಾರೀ ಮಳೆಯ ಕಾರಣ ಪತ್ತೆಯಾಗಿಲ್ಲ.
ಭಾರಿ ಮಳೆ ಹಾಗೂ ಪ್ರವಾಹದ ಕಾರಣದಿಂದ ಮೃತದೇಹ ಪತ್ತೆ ಕಾರ್ಯಾಚರಣೆಗೆ ವಿಳಂಬವಾಗಿ ಮೃತದೆಹವು ಇನ್ನು ಪತ್ಯೆಯಾಗದ ಕಾರಣ ಯಾವುದೇ ಸಮಯದಲ್ಲಿ ಪಂಚ ಗಂಗಾವಳಿ ನದಿಯ ಯಾವುದೇ ಭಾಗದಲ್ಲಿ ಕಂಡುಬಂದರೂ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಇ ಮೊಬೈಲ್ ಸಂಖ್ಯೆಗೆ 9663434415, 9483858923 ಸಂಪರ್ಕಿಸುವಂತೆ ಈಶ್ವರ್ ಮಲ್ಪೆ ತಿಳಿಸಿರುತ್ತಾರೆ
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.