ಮಣಿಪಾಲ: ಜುಲೈ 16: ಮಣಿಪಾಲದ ಫ್ಲ್ಯಾಟ್ ವೊಂದರಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿನಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ರಕ್ಷಣೆಗೊಳಗಾದ ಯುವತಿ ಕ್ರತಿ ಗೋಯಲ್(25) ಎಂದು ತಿಳಿದು ಬಂದಿದೆ ಸೋಮವಾರ ರಾತ್ರಿ ಬಾಗಿಲು ಹಾಕಿ ಮಲಗಿದ್ದ ಇವರಿಗೆ ಬೆಳಗ್ಗೆ ತೆರೆಯಲು ಸಾಧ್ಯವಾಗಲಿಲ್ಲ. ಕೀ ಯನ್ನು ಹೊರಭಾಗದಿಂದಲೇ ತೆಗೆಯಬೇಕಿತ್ತು. ಕೂಡಲೇ ಅವರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸಿಬ್ಬಂದಿ ಆಗಮಿಸಿ ಹಿಂಭಾಗದ ಕಿಟಕಿ ಒಡೆದು ಆಕೆಯನ್ನು ರಕ್ಷಿಸಿದ್ದಾರೆ.