ಅಂಕೋಲಾ : ಜುಲೈ 16:ಉತ್ತರ ಕನ್ನಡ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದಿಂದ ಮಂದಿ ಮಣ್ಣಿನಡಿ ಸಿಲುಕಿ 7 ಜನರು ಸಾವನ್ನಪ್ಪಿದ್ದ ಘಟನೆಗೆ ಸಂಬಂಧಿಸಿದಂತೆ, ಇದೀಗ 9 ಜನರು ಈ ಒಂದು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ
ಇಬ್ಬರು ನಾಪತ್ತೆಯಾಗಿದ್ದು 7 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಭಾರೀ ಮಳೆಗೆ ಗುಡ್ಡ ಕುಸಿದು ಏಳು ಮಂದಿ ಸಾವನ್ನಪಿದ್ದಾರೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ. ಆದರೆ ಇದೀಗ ಮೃತರ ಸಂಖ್ಯೆ 9ಕ್ಕೆ ಏರಿದೆ.
ಕಾರವಾರದಲ್ಲಿ ಗುಡ್ಡ ಕುಸಿದು 9 ಮಂದಿ ಜೀವಂತ ಸಮಾಧಿಯಾಗಿದ್ದು, 9 ಮಂದಿಯಲ್ಲಿ 7 ಮಂದಿ ದುರ್ಮರಣಹೊಂದಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಅಂಕೋಲ ತಾಲೂಕಿನ ಶಿರೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಗುಡ್ಡ ಕುಸಿತದಿಂದ ಗಂಗಾವಳಿ ನದಿಗೆ ಟ್ಯಾಂಕರ್ ಬಿದ್ದಿದೆ.
ಈ ವೇಳೆ ಚಾಲಕ ಮತ್ತು ಕ್ಲೀನರ್ ಟೀ ಕುಡಿದಿದ್ದ ವೇಳೆ ಗುಡ್ಡ ಕುಸಿತ ಉಂಟಾಗಿದೆ ಸಂದರ್ಭದಲ್ಲಿ ಟ್ಯಾಂಕರ್ ಚಾಲಕ ಕ್ಲೀನರ್ ಸೇರಿ 9 ಜನರ ಮೇಲೆ ಗುಡ್ಡ ಕುಸಿದಿದೆ.ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇದೀಗ ಮೃತದೇಹಗಳಿಗೆ ಕಾರ್ಯಾಚರಣೆ ಮುಂದುವರೆದಿದೆ.