ಉಡುಪಿ :ಜುಲೈ 16 :ನಿಂತಿದ್ದ ಬಸ್ಸಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಲ್ಪೆ ಸಿಟಿಜನ್ ಸರ್ಕಲ್ ಸಮೀಪದ ನೆರ್ಗಿ ಎಂಬಲ್ಲಿ ಇಂದು ಬೆಳಿಗ್ಗೆ 7:30 ಕ್ಕೆ ನಡೆದಿದೆ.
ಗಾಯಾಳುವನ್ನು ಉಡುಪಿ ಗುಂಡಿಬೈಲಿನ ಲಕ್ಷಣ (60) ಎಂದು ಗುರುತಿಸಲಾಗಿದ್ದು , ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ತಮ್ಮ ಅಂಬುಲೆನ್ಸ್ ಮೂಲಕ ಗಾಯಾಳುವನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಗೊಂಡಿರುವ ಈ ವ್ಯಕ್ತಿಯ ಮಗನ ಹೆಸರು ಸಚಿನ್ ಹಾಗೂ ಪತ್ನಿಯ ಹೆಸರು ರತ್ನ ಹಾಗೂ ಗುಂಡಿಬೈಲು ವಿನಲ್ಲಿ ಅವರಿಗೆ ಕಾರ್ತಿಕ್ ವೆಲ್ಡಿಂಗ್ ವರ್ಕ್ ಶಾಪ್ ಇದೆ ಎಂದು ಹೇಳಲಾಗುತ್ತಿದೆ