ಮಣಿಪಾಲ:ಜುಲೈ 13:ಹೂಡೆ ನಿವಾಸಿ ನಹೀಮಾ ಅಖ್ತರ್ ಅವರಿಗೆ ಮಣಿಪಾಲ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪ್ರದಾನಿಸಲಾಯಿತು.
ಅವರು “Impact of Patient’s Happiness on Perceived Service Quality and Behavioural Intentions in Adverse Services” ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದರು. ಡಾ.ಸ್ಮಿತಾ ನಾಯಕ್ ಮತ್ತು ಡಾ.ಯೊಗೇಶ್ ಪೈ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಪೂರ್ಣಗೊಳಿಸಿದ್ದರು.
ಡಾ.ನಹೀಮಾ ಅಖ್ತರ್ ಅತ್ಯಂತ ಬಡ ಕುಟುಂಬದಿಂದ ಬಂದು ಈ ಸಾಧನೆಗೈದಿದ್ದು ಪಿಯುಸಿ ಹಂತದವರೆಗೆ ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ವಿದ್ಯಾಭ್ಯಾಸ ಮುಂದುವರಿಸಿದ್ದರು. ಅವರು ದಿ.ಅಬ್ದುಲ್ ಗಫೂರ್ ಮತ್ತು ದಿ.ರಮೀಝಾ ಅವರ ಪುತ್ರಿಯಾಗಿದ್ದಾರೆ. ಹೂಡೆಯ ಖ್ಯಾತ ವೈದ್ಯರಾದ ಡಾ. ಅಫ್ಫಾನ್ ಅವರ ಪತ್ನಿಯಾಗಿದ್ದಾರೆ. ಅವರ ಈ ಸಾಧನೆಯ ಹಿಂದೆ ಪತಿಯ ಬೆಂಬಲ ಅಪೂರ್ವವಾಗಿದೆ.