ಉಡುಪಿ : ಜುಲೈ 13: ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶ ನೀಡುವ ಆಮಿಷ ಒಡ್ಡಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.
ಬೈಲಕೆರೆಯ ಕೆ. ಗುರುಪ್ರಸಾದ್ ವಂಚನೆಗೊಳಗಾದವರು. ಇವರ ವಾಟ್ಸಾಪ್ ಸಂಖ್ಯೆಗೆ ಜಿಎಸ್‌ಎಎಂ ಮಾರುಕಟ್ಟೆ ಕಂಪೆನಿಯಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಹಣ ಪಡೆಯಬಹುದು ಎಂಬ ಆಮಿಷ ಒಡ್ಡಲಾಗಿತ್ತು
ಅದನ್ನು ನಂಬಿದ ಅವರು ಜೂ.26ರಿಂದ ಜು.2ರ ವರೆಗೆ ರಂದು ಐಎಂಪಿಎಸ್ ಹಂತಹಂತವಾಗಿ 1,00,000 ರೂ.ಗಳನ್ನು ವರ್ಗಾವಣೆ ಮಾಡಿದ್ದರು. ಆದರೆ ಅಪರಿಚಿತ ಆರೋಪಿಯು ಹಣ ಹಿಂದಿರುಗಿಸದೆ ವಂಚನೆ ಎಸಗಿದ್ದಾನೆ.ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ