ಉಡುಪಿ :ಜುಲೈ 13:ಬಾಲಕಿಯೊಬ್ಬಳನ್ನು ಅಪಹರಿಸಿರುವ ಬಗ್ಗೆ ತಾಯಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಉಡುಪಿ ಬೈಲೂರಿನ ಆಶಾಲತಾ ಎಂಬವರ ಮಗಳು ದೀಕ್ಷಾ ಅಪಹರಣಕ್ಕೆ ಒಳಗಾದ ಬಾಲಕಿ.
ಜು.11ರಂದು ಮಧ್ಯಾಹ್ನ ಮನೆಯಲ್ಲಿದ್ದ ದೀಕ್ಷಾ ಬಳಿಕ ನಾಪತ್ತೆಯಾಗಿದ್ದಳು.ಈ ಬಗ್ಗೆ ಆಕೆಯನ್ನು ಶಾಲೆಗೆ ಬಿಡುತ್ತಿದ್ದ ರಿಕ್ಷಾ ಚಾಲಕನಲ್ಲಿ ವಿಚಾರಿಸಿದರೂ ಪತ್ತೆಯಾಗಿರಲಿಲ್ಲ. ಆಕೆಯನ್ನು ಯಾರೋ ದುರುದ್ದೇಶದಿಂದ ಅಪಹರಣ ಮಾಡಿರುವ ಸಂದೇಹ ಇದೆ ಎಂದು ಆಶಾಲತಾ ದೂರಿನಲ್ಲಿ ತಿಳಿಸಿದ್ದಾರೆ.