ಕುಂದಾಪುರ : ಜುಲೈ 12:ವಂಡ್ಸೆ ಪೇಟೆಯ ಅನತಿ ದೂರದಲ್ಲಿರುವ ಕಾನಮ್ಮ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಅಡಿಕೆಕೊಡ್ಡು ಮನೆಗಳಿಗೆ ಹೋಗುವ ದಾರಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ಮೇಲೆ ಕೆಸರು ನೀರು ಇದ್ದಿರುತ್ತದೆ.
ಈ ದಾರಿಯಲ್ಲಿ ಶಾಲೆ ಮಕ್ಕಳು, ವಾಹನ ಸವಾರರು, ಹೋಗಲು ಹರ ಸಹಸ ಪಡುತ್ತಾರೆ. ಈ ಮಾರ್ಗವನ್ನು ಸುಮಾರು 30-40 ಮನೆಯವರು ಅವಲಂಬಿಸಿರುತ್ತಾರೆ.
ಈ ದಾರಿಯಲ್ಲಿ ನಡೆದುಕೊಂಡು ಹೋಗಲಿಕ್ಕೆ ತುಂಬಾ ಕಷ್ಟ ಸಾಧ್ಯ. ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆ ಇರುತ್ತದೆ.ಸಂಬಂಧಪಟ್ಟವರು ಈ ದಾರಿಗಳಿಗೆ ಸೂಕ್ತ ಚರಂಡಿ ವ್ಯವಸ್ಥೆ ಮಾಡಿಬೇಕು ಎಂದು ಸ್ಥಳಿಯರ ಬೇಡಿಕೆಯಾಗಿದೆ