ಉಡುಪಿ:ಕಾಪು ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ್ದ ದಕ್ಷಿಣ ಕನ್ನಡ ಮೂಲದ ಉಪ್ಪಿನಂಗಡಿಯ 21 ವರ್ಷದ ಯುವತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತೆಯನ್ನು ಉಪ್ಪಿನಂಗಡಿ ಮೂಲದ ಶಫೀರಾ (21) ಎಂದು ಗುರುತಿಸಲಾಗಿದೆ.
ಬಂಧಿತೆಯು ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ಮತ್ತು ಆಶ್ರಯ ವ್ಯವಸ್ಥೆ ಮಾಡಿದ್ದಳು. ಗ್ಯಾಂಗ್ ಸದಸ್ಯರಿಗೆ ಮೊಬೈಲ್ ಫೋನ್ ನೀಡಿ ಹಣ ವರ್ಗಾವಣೆ ಮಾಡಿರುವ ಆರೋಪವೂ ಬಂಧಿತೆ ಶಫೀರಾ ಮೇಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.
ಈ ಗರುಡ ಗ್ಯಾಂಗ್‌ನ ಸದಸ್ಯರು ಕೆಲ ದಿನಗಳ ಹಿಂದೆ ಉಡುಪಿ-ಮಣಿಪಾಲ ಹೆದ್ದಾರಿಯಲ್ಲಿ ರಸ್ತೆಗಿಳಿದು ಕೊಲೆಗೆ ಯತ್ನಿಸಿದ್ದರು. ನಗರದಲ್ಲಿ ತಡರಾತ್ರಿ ಕತ್ತಿ ಮತ್ತಿತರ ಆಯುಧಗಳೊಂದಿಗೆ ಬೀದಿ ಕಾಳಗ ನಡೆಸಿದ್ದರು.