ಉಡುಪಿ : ಜುಲೈ 11:ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ವಲಯ ಸಮಿತಿ ನೇತೃತ್ವದಲ್ಲಿ ಇಂದು ತಾರೀಖು11.07.2024 ರಂದು ರಾಷ್ಷ ವ್ಯಾಪಿ ಬೇಡಿಕೆ ದಿನದ ಅಂಗವಾಗಿ ಮಾನ್ಯ ಅಪಾರ ಜಿಲ್ಲಾಧಿಕಾರಿ ಶ್ರೀ ಮತಿ ಮಮತಾ ದೇವಿ ಯವರ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ 30 ಪ್ರಮುಖ ಬೇಡಿಕೆ ಗಳು ಇರುವ ಮನವಿಯನ್ನು ಸಲ್ಲಿಸಲಾಯಿತು.
ಪ್ರಮುಖ ಹಕ್ಕೊತ್ತಾಯಗಳು
1.ನಾಲ್ಕು ಕಾರ್ಮಿಕ ಸಂಹಿತೆಗಳನ್ನು(Labour Code)ಹಿಂಪಡೆಯಬೇಕು.
2.ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು.ಶ್ರೀ ಮಂತರ ಮೇಲಿನ ತೆರಿಗೆ ಹೆಚ್ಚಿಸಿ,ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ನೀತಿಗಳನ್ನು ಜಾರಿಗೆ ತರಬೇಕು.
3.ರೈತ ವಿರೋಧಿ ಕ್ರಷಿ ಕಾನೂನುಗಳನ್ನು ವಾಪಾಸ್ ಪಡೆಯಬೇಕು. ಕ್ರಷಿ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತರಿಪಡಿಸಬೇಕು. ಎಪಿಎಂಸಿ ವ್ಯವಸ್ಥೆಯನ್ನು ಬಲಗೊಳಿಸಬೇಕು.ಗೊಬ್ಬರ ಒಳಗೊಂಡಂತೆ ಕ್ರಷಿ ಇಡುವಳಿಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೈಬಿಡಬೇಕು.
4.ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಎಲ್ಲಾ ಸ್ವರೂಪದ ಖಾಸಗಿಕರಣವನ್ನು ಕೈಬಿಡಬೇಕು.ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು.
5.ಶಿಕ್ಷಣವನ್ನು ದುಬಾರಿಗೊಳಿಸುವ ಹಾಗೂ ಅವೈಜ್ಞಾನಿಕ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಬಾರದು
6.ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ, ಪರಿಹಾರ ಯೋಜನೆ ರೂಪಿಸಬೇಕು.ವಿದ್ಯಾರ್ಥಿ ವೇತನ ಹಾಗೂ ಕಲ್ಯಾಣ ಯೋಜನೆಗಳ ಸಮರ್ಪಕ ಜಾರಿಗೆಅನುವಾಗುವಂತೆ ಕೇಂದ್ರ ಸರಕಾರವು ಜಿ.ಎಸ್.ಟಿ ಯಿಂದ ಕಲ್ಯಾಣ ನಿಧಿಗೆ ಪಾಲು ನೀಡಬೇಕು. ಹಾಗೂ ಬಕಿ ಇರುವ ತುಟ್ಟಿಭತ್ಯೆಯನ್ನು ಕೂಡಲೇ ಕೊಡುವ ಹಾಗೆ ಮಾಲಕರಿಗೆ ಸರ್ಕಾರ ಒತ್ತಡ ಹಾಕಬೇಕು.
7. 49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು 20ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ,ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ 31 ಸಾವಿರ ಕನಿಷ್ಠ ವೇತನ, ನಿವ್ರತ್ತಿ ಸೌಲಭ್ಯಗಳು ಕನಿಷ್ಠ. 10 ಸಾವಿರ ಪಿಂಚಣಿ ಕೊಡಬೇಕು.
8.ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಫಲನುಭವಿಗಳ ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಧನ ಸಹಾಯ ಕಡಿತ ಆದೇಶ ಹಿಂಪಡೆದು ಹಿಂದಿನಂತೆ ಧನಸಹಾಯ ಮುಂದುವರಿಸಬೇಕು.
9.ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ವಾರ್ಷಿಕ 200 ದಿನಗಳು ಹಾಗೂ ದಿನಕ್ಕೆ ರೂ 700 ವೇತನದೊಂದಿಗೆ ವಿಸ್ತಾರಗೊಳಿಸಬೇಕು ಹಾಗೂ ನಗರ ಪ್ರದೇಶಕ್ಕೂ ಉದ್ಯೋಗ ಖಾತರಿ ಯೋಜನೆಯನ್ನು ವಿಸ್ತರಿಸಬೇಕು
ನಿಯೋಗದಲ್ಲಿ ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್, ಬ್ರಹ್ಮವಾರ ಸಿಐಟಿಯು ಸಂಚಾಲಕರಾದ ರಾಮ ಕಾರ್ಕಡ, ಉಡುಪಿ ಜಿಲ್ಲಾಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷ ರಾದ ಸುಭಾಸ್ ನಾಯಕ್,ಬ್ರಹ್ಮವಾರ.ಪ್ರಧಾನ ಕಾರ್ಯದರ್ಶಿ ಶಶಿಧರ ಗೋಲ್ಲ, ಸಾಲಿಗ್ರಾಮ ಕಟ್ಟಡ ಸಂಘದ ಮುಖಂಡರಾದ ಮಹಾಬಲ ಪೂಜಾರಿ ಕಾರ್ಕಡ, ಉಡುಪಿ ವಲಯ ಅಟೋ ರಿಕ್ಷಾ ಸಂಘದ ಮುಖಂಡರಾದ ಸದಾಶಿವ ಪೂಜಾರಿ ಬ್ರಹ್ಮವಾರ, ಉಡುಪಿ ಬೀಡಿ ಎಂಡ್ ಟೋಬ್ಯಾಕೊ ಲೇಬರ್ ಯೂನಿಯನ್ ಅಧ್ಯಕ್ಷ ರಾದ ನಳಿನಿ.ಎಸ್,ಅಂಗನವಾಡಿ ಉಡುಪಿ ವಲಯ ಮುಖಂಡರಾದ ಲಲಿತ ಹಾಗೂ ಸಿಐಟಿಯು ಉಡುಪಿ ವಲಯದ ಮುಖಂಡರಾದ ಮೋಹನ್ ಉಪಸ್ಥಿತರಿದ್ದರು.