ಉಡುಪಿ : ಜುಲೈ 11: ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ‘ಯಕ್ಷ ಶಿಕ್ಷಣ’ಕ್ಕೆ ಇಂದು ಜು.11ರ ಮದ್ಯಾಹ್ನ 2:30ಕ್ಕೆ . ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಚಾಲನೆ ದೊರೆಯಲಿದೆ..
ಈ ಬಾರಿ ಉಡುಪಿ ಅಲ್ಲದೆ ಕಾಪು, ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರದ ಒಟ್ಟು 90 ಪ್ರೌಢಶಾಲೆ ಗಳಲ್ಲಿ ಯಕ್ಷಶಿಕ್ಷಣ ಆರಂಭಗೊಳ್ಳಲಿದ್ದು ಇದರ ಉದ್ಘಾಟನೆಯನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ನೆರವೇರಿಸಲಿದ್ದಾರೆ.
ಈ ಬಾರಿ ಯಕ್ಷಗಾನ ತರಬೇತಿಗೆ ಆಯ್ಕೆಯಾಗಿರುವ 90 ಶಾಲೆಗಳ ಮುಖ್ಯಶಿಕ್ಷಕರು ಮತ್ತು 40 ಮಂದಿ ಯಕ್ಷ ಗುರುಗಳು ಸಹ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾಹಿತಿ ನೀಡಿದ್ದಾರೆ .