ಬ್ರಹ್ಮಾವರ : ಜುಲೈ 07:ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘ ಉಡುಪಿ ವಲಯ ಸಮ್ಮೇಳನ(ಉಡುಪಿ, ಕಾಪು,ಬ್ರಹ್ಮವರ) ಇಂದು ಬ್ರಹ್ಮವರದ ಸಿಐಟಿಯು ಕಛೇರಿ ಸಭಾಂಗಣದಲ್ಲಿ ವೆಂಕಟೇಶ ಕೋಣಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮ್ಮೇಳನವನ್ನು ಕರ್ನಾಟಕ ರಾಜ್ಯ ಕ್ರಷಿಕೂಲಿಕಾರರ ಸಂಘ ( AIAWU) ನ ರಾಜ್ಯ ಅಧ್ಯಕ್ಷ ರಾದ ಪುಟ್ಟುಮಾದು ಉಧ್ಘಾಟಿಸಿ ಮಾತನಾಡುತ್ತಾ ಇಂದಿನ ಸರಕಾರಗಳು ಕೂಲಿಕಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಪ್ರತಿ ವರ್ಷ ಬಜೆಟ್ ಮಂಡನೆ ಮಾಡುತ್ತಾರೆ ಅದರೆ ಕೂಲಿಕಾರರಿಗೆ ಇವತ್ತು ಯಾವುದೇ ಸವಲತ್ತುಗಳು ಸಿಗುತ್ತಿಲ್ಲ .ಶಾಸಕರು, ಸಂಸದರು,ಅಧಿಕಾರಿಗಳು ಬಜೆಟ್ ಹಣವನ್ನು ಲೂಟಿ ಮಾಡುತ್ತಿದಾರೆ.ಇವತ್ತಿನ ಬೆಲೆ ಎರಿಕೆ ಅನುಗುಣವಾಗಿ ಕೂಲಿ ಹೆಚ್ಚಳ ಸಿಗುತ್ತಿಲ್ಲ.ಅದ್ದರಿಂದ ಕೂಲಿಕಾರರಿಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕಾಗಿದೆ. ನಮ್ಮ ದೇಶದಲ್ಲಿ ಇಂದು 47%ಕಚ್ಚಾಮನೆಗಳು ಹಾಗೂ 21% ವಸತಿ ರಹಿತರು ಇದ್ದಾರೆ.ಸರಕಾರವು ಜೋಪಡಿ ಮನೆಯಲ್ಲಿ, ಬಾಡಿಗೆ ಮನೆಯಲ್ಲಿ ಇರುವ ಕೂಲಿಕಾರರಿಗೆ ಎಲ್ಲರಿಗೂ ರೇಷನ್ ಕಾರ್ಡ್, ಭದ್ರತೆ ಸರಕಾರ ಕೊಡಬೇಕು ಎಂದು ಸಮ್ಮೇಳನದಲ್ಲಿ ಒತ್ತಾಯಿಸಿ ಮಾತನಾಡಿದರು.
ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಸಂಜೀವ ಬಳ್ಕೂರ್ ಮಾತಾನಾಡಿ ಇವತ್ತಿನ ಪರಿಸ್ಥಿತಿಯಲ್ಲಿ ಕೂಲಿಕಾರರಿಗೆ ಉಚಿತ ಶಿಕ್ಷಣ, ಆರೋಗ್ಯ ವನ್ನು ಇವತ್ತು ನಮ್ಮನ್ನು ಅಳುವ ಸರಕಾರಗಳು ನೀಡಬೇಕು ಎಂದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ರಾದ ಸುಭಾಷ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಗೋಲ್ಲ ,ಉಡುಪಿ ಜಿಲ್ಲಾ ಕ್ರಷಿಕೂಲಿಕಾರರ ಸಂಘ ಕಾರ್ಯದರ್ಶಿ ವೆಂಕಟೇಶ್ ಕೋಣಿ ಪ್ರಾಸ್ತಾವಿಕ ವಾಗಿ ಮಾತಾನಾಡಿದರು.ಕ್ರಷಿ ಕೂಲಿಕಾರರ ಸಂಘದ ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್,ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿ ಕೊನೆಯಲ್ಲಿ. ಶಾರದರವರು ಧನ್ಯವಾದ ನೀಡಿದರು.