ಕಾರ್ಕಳ :ಜುಲೈ 05:ಕಾರ್ಕಳ ಬ್ಲಾಕ್ ಕಾಂಗ್ರೆಸ್ ಇವರ ಆಶ್ರಯದಲ್ಲಿ ದಿವಂಗತ ಮಾಜಿ ಶಾಸಕ ಎಚ್ ಗೋಪಾಲ್ ಭಂಡಾರಿ ಅವರ ಐದನೇ ಪುಣ್ಯಸ್ಮರಣೆ ಅಂಗವಾಗಿ ಪೆರುವಾಜೆ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬ್ರಹತ್ ರಕ್ತದಾನ ಶಿಬಿರ ನಡೆಯಿತು
ಈ ಸಂದರ್ಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನವಾಗಿದೆ ರಕ್ತದಾನದಿಂದ ಒಂದು ಜೀವವನ್ನು ಉಳಿಸಬಹುದು. ನಮ್ಮ ಮಾಜಿ ಶಾಸಕರಾದ ದಿವಂಗತ ಗೋಪಾಲ ಭಂಡಾರಿ ಅವರು ಉತ್ತಮ ನಾಯಕರಾಗಿದ್ದರು. ಇನ್ನು ನಮಗೆ ಇಂತ ನಿಷ್ಠಾವಂತ ಉತ್ತಮ ನಾಯಕ ಸಿಗುವುದು ಕಷ್ಟ ಇಂದು ಅವರ ಐದನೇ ವರ್ಷದ ಪುಣ್ಯಸ್ಮರಣೆಯನ್ನು ರಕ್ತದಾನದ ಮೂಲಕ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ನಂತರ ಮಾತನಾಡಿದ ಹಿರಿಯ ನ್ಯಾಯವಾದಿ ಶೇಖರ ಮಡಿವಾಳ್ ನಾವು ತುಂಬಾ ನಿಷ್ಠಾವಂತ ಹಾಗೂ ಧೀಮಂತ ನಾಯಕನನ್ನು ಕಳೆದುಕೊಂಡಿದ್ದೇವೆ ನಾವಿಂದು ಬಂಡಾರಿಯವರ ಐದನೇ ವರ್ಷದ ಪುಣ್ಯ ಸ್ಮರಣೆ ರಕ್ತದಾನದಂತ ಅತ್ಯುತ್ತಮ ಕೆಲಸವನ್ನು ಮಾಡಿ ಅವರ ಆತ್ಮಕ್ಕೆ ಶಾಂತಿ ಸಿಗುವ ಹಾಗೆ ಮಾಡುತ್ತಿದ್ದೇವೆ ಎಂದು ಹೇಳಿದರು.
ನಂತರ ಕಾಂಗ್ರೆಸ್ ವಕ್ತಾರಾ ಬಿಪಿನ್ ಚಂದ್ರ ಪಾಲ್ ಹಾಗೂ ಪುರಸಭಾ ಸದಸ್ಯರು ವಿರೋಧ ಪಕ್ಷದ ನಾಯಕರಾದ ಅಷ್ಪಕ ಅಹಮದ್ ನುಡಿನ ಮನಸಲ್ಲಿಸಿ ಭಂಡಾರಿ ಅವರ ಬಗ್ಗೆ ಗುಣಗಾನ ಮಾಡಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ, ಹಿಂದುಳಿದ ವರ್ಗದ ಉಪಾಧ್ಯಕ್ಷರಾದ ಡಿ ಆರ್ ರಾಜು, ನೀರೇ ಕೃಷ್ಣ ಶೆಟ್ಟಿ, ಮಂಜುನಾಥ ಪೂಜಾರಿ, ಸುಬಿ ತ್ ಎನ್ ಆರ್, ಚಂದ್ರಶೇಖರ್ ಬಾಯಾರಿ ಇನ್ನಿತರರು ಉಪಸ್ಥಿತರಿದ್ದು ಶುಭದರಾವ್ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.