ಉಡುಪಿ :ಜುಲೈ 04:ಜಿಲ್ಲೆಯ ಮಲ್ಪೆ ಸಮೀಪದ ತೊಟ್ಟಂ ನಲ್ಲಿ ವಾಸವಾಗಿರುವ ಗದಗ ಮೂಲದ ತುಂಬು ಗರ್ಭಿಣಿ ಪವಿತ್ರ ಎಂಬವರಿಗೆ ಬೆಳಿಗ್ಗೆ 11:30 ಗಂಟೆಗೆ ಪ್ರಸವಬೇನೆ ಶುರುವಾಗಿತ್ತು
ಆಶಾ ಕಾರ್ಯಕರ್ತೆ 108 ಆಂಬುಲೆನ್ಸ್ ಗೆ ಕರೆ ಮಾಡಿದರೂ ಕೂಡ 108 ಆಂಬುಲೆನ್ಸ್ ಸ್ಥಳಕ್ಕೆ ಧಾವಿಸದೆ ಮನೆಯಲ್ಲೇ ಮಗುವಿನ ಜನನವಾಗಿದೆ
ನಂತರ ಈಶ್ವರ್ ಮಲ್ಪೆಯವರಿಗೆ ಆಶಾ ಕಾರ್ಯಕರ್ತೆ ಕರೆ ಮಾಡಿ ವಿಚಾರ ತಿಳಿಸಿದರು ಎನ್ನಲಾಗಿದೆ
ಕರೆಗೆ ಸ್ಪಂದಿಸಿದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ತಕ್ಷಣ ತೊಟ್ಟಂ ಕರಾವಳಿ ಯುವಕ ಮಂಡಲದ ಬಳಿಯಿರುವ ಮನೆಗೆ ತಲುಪಿ ತಾಯಿ ಮತ್ತು ನವಜಾತ ಶಿಶುವನ್ನು ರಕ್ತಸ್ರಾವವಾಗದ ರೀತಿಯಲ್ಲಿ ಆಂಬುಲೆನ್ಸ್ ಮುಖಾಂತರ ಉಡುಪಿಯ ಹಾಜಿ ಅಬ್ದುಲ್ಲಾ ಆಸ್ಪತ್ರೆಗೆ ತಲುಪಿಸಿ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು
ಹಾಜಿ ಅಬ್ದುಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ತಾಯಿ ಮಗುವಿಗೆ ಬೇಕಾದ ಚಿಕಿತ್ಸೆಯನ್ನು ನೀಡಿದರು.ಸದ್ಯ ತಾಯಿ ಮತ್ತು ಮಗು ಅಪಾಯದಿಂದ ಪಾರಾಗಿದ್ದಾರೆ.
ತುರ್ತು ಪರಿಸ್ಥಿತಿ ಯಲ್ಲಿ ಸರಿಯಾದ ಸಮಯಕ್ಕೆ 108 ಆಂಬುಲೆನ್ಸ್ ಸೇವೆ ಲಭ್ಯವಾಗದೇ ಇರುವುದು ದುರಂತವೇ ಸರಿ.. ಸರಿಯಾದ ಸಮಯಕ್ಕೆ ಇವರ ಸಮಸ್ಯೆಗೆ ಸ್ಪಂದಿಸಿ ತಮ್ಮ ಆಂಬುಲೆನ್ಸ್ ಮೂಲಕ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ತಾಯಿ ಮಗುವನ್ನು ರಕ್ಷಿಸಿದ ಈಶ್ವರ್ ಮಲ್ಪೆ ಮತ್ತು ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ