ಉಡುಪಿ :ಜೂನ್ 03:ಉಡುಪಿಯ ಸಂತಕಟ್ಟೆ ಅಂಡರ್ ಪಾಸ್ ಕಾಮಗಾರಿ ಚುನಾವಣೆ ಪೂರ್ವ ತರಾತುರಿಯಲ್ಲಿ ಕಾಮಗಾರಿ ನಡೆಸಿ ಅಂಡರ್ ಪಾಸ್ ನಲ್ಲಿ ವಾಹನ ಸಂಚಾರ ಮಾಡಲು ಅನುವು ಮಾಡಿಕೊಟ್ಟು ಇದೀಗ ವಾಹನ ಸವಾರರು ಹೊಸ ರಸ್ತೆಯಲ್ಲಿ ಚಲಿಸಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ
ಹೊಸ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು. ಇದೀಗ ವಾಹನ ಚಲಾಯಿಸುವುದು ಕಷ್ಟದ ಕೆಲಸವಾಗಿದೆ. ಹೊಸ ಡಾಮರಿಕರಣ ಮಾಡಿದ ಹೊಸ ರಸ್ತೆ ಗುಂಡಿಗಳಿಂದ ಕೂಡಿದೆ.
ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದೇ ಅಪಾಯಕಾರಿಯಾಗಿದೆ. ಈಗಾಗಲೇ ವಾಹನಗಳು ಚಲಿಸುವಾಗ ಕೆಸರು ಮಣ್ಣಿನಲ್ಲಿ ಚಲಿಸಿದಂತ ಅನುಭವ ಆಗುತ್ತದೆ ಎಂದು ಕಾರು ಚಾಲಕ ಸುಧೀರ್ ಶೇಟ್ ತಿಳಿಸಿದ್ದಾರೆ..
ಅಪಾಯಕಾರಿ ರಸ್ತೆಯನ್ನು ಕೂಡಲೇ ಬಂದು ಮಾಡಿ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.