ಪರ್ಕಳ: ಶ್ರೀಮಾಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಎದುರುಗಡೆಯಲ್ಲಿ ನಿರ್ಮಾಣವಾಗುತ್ತಿರುವ ಕೆರೆ ಈ ಬಾರಿಯೂ ಮೊದಲ ಮಳೆಗೆಯೇ ಕುಸಿದಿದ್ದು ಉಡುಪಿಯ ಜಿಲ್ಲಾಧಿಕಾರಿ ವಿದ್ಯಾ ಕುಮಾರಿಯವರು ಭೇಟಿ ನೀಡಿ ಪರಿಶೀಲಿಸಿದರು ಸಣ್ಣ ನೀರಾವರಿ ಇಲಾಖೆಯಿಂದ ಬಹುಕೋಟಿ ಅನುದಾನದಿಂದ ನಿರ್ಮಾಣವಾಗುತ್ತಿರುವುದು ಈಗ ನಾಲ್ಕನೇ ಬಾರಿಯೂ ಕೆರೆದಂಡೆ ಕುಸಿಯುತ್ತಿರುವುದು ಅವೈಜ್ಞಾನಿಕದ ವಿನ್ಯಾಸ ಹಾಗೂ. ಕಾಮಗಾರಿಯ ಗುಣಮಟ್ಟ ಕಳಪೆಆಗಿರುತ್ತದೆ
ಮಳೆ ನೀರು ಹರಿದು ಹೋಗಲು ಸರಿಯಾದ ತೋಡು, ಕೆರೆಯ ಅಕ್ಕಪಕ್ಕದಲ್ಲಿ ನಿರ್ಮಾಣ ಮಾಡದೇ ಇರುವುದು. ಮತ್ತು ಈ ಬಾರಿ ಕೆರೆಯ ಪಕ್ಕದಲ್ಲಿ ಯಥೇಚ್ಛವಾಗಿ ಸುತ್ತಲ ಶೇಡಿಮಣ್ಣನ್ನು ತೆಗೆದಿರುವುದು. ಹಾಗೂ ಬೆಲೆಬಾಳುವ ಮರಗಳನ್ನು ಅಲ್ಲಿಂದ ತೆಗೆದಿರುವುದರಿಂದ ಮಣ್ಣು ಸವೆತವಾಗಿದೆ ಕೆರೆಯ ಸುತ್ತಮುತ್ತ ಗುಣಮಟ್ಟದ ಕಾಮಗಾರಿ ನಡೆಸಿದೆ ಇರುವುದು ಮೇಲ್ನೋಟಕ್ಕೆ ಕಣ್ಣದಷ್ಟಿಗೆನೇ ಕಂಡು ಬಂದಿದೆಕಂಡು ಬರುತ್ತಿದ್ದು. ಸ್ಥಳೀಯರು ತಿಳಿಸಿದ್ದಾರೆ. ಈ ರೀತಿಯ ಕಾಮಗಾರಿಯನ್ನು ನಡೆಸಿರುವುದನ್ನು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದ್ದಾರೆ.
ಕೆರೆಯ ಈ ರೀತಿಯ ದಂಡೆ ಕುಸಿಯಲು ಸುತ್ತಮುತ್ತದ ಬೆಲೆ ಬಾಳು ಮರ ಹಾಗೂ ಪಕ್ಕದಲ್ಲಿರುವ ಮಣ್ಣು ಅಗೆದು ಬೇರಡೆ ಸಾಗಾಟವೇ ಮೂಲ ಕಾರಣವೆಂದು. ಅದರ ಜೊತೆಗೆ ಕೆರೆವಿನ್ಯಾಸದಲ್ಲಿ ವ್ಯತ್ಯಾಸ. ಮತ್ತು ಗುಣಮಟ್ಟದ ಕಾಮಗಾರಿ ನಡೆಸದೇ ಇರುವುದು ಕಂಡುಬಂದಿದೆ. ಈ ರೀತಿಯ ಕಾಮಗಾರಿಯಿಂದ ಪದೇ ಪದೇ ಕೆರೆದಂಡೆ ಬೀಳುತ್ತಿರುವುದು ಕೆರೆದಂಡೆಯ ಕಾಮಗಾರಿ ಉತ್ತಮ ಗುಣಮಟ್ಟದಲ್ಲ ಎಂದು ಸ್ಥಳೀಯರು ಕೆರೆ ಸಮೀಪ ಭೇಟಿ ನೀಡಿದ ಜಿಲ್ಲಾಧಿಕಾರಿಗೆ ಮನಮುಟ್ಟುವಂತೆ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಜೊತೆ ಇದ್ದರು