ಸಿದ್ದಾಪುರ:ಜೂನ್ 29 :ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಅನತಿದೂರದ ಶಂಕರನಾರಾಯಣ ಪೇಟೆಯಲ್ಲಿ ಮಲಗಿದ್ದ ದನವನ್ನು ದನ ಕಳ್ಳರು ಜೂ.25ರಂದು ಬೆಳಗಿನ ಜಾವದಲ್ಲಿ ಐಷಾರಾಮಿ ಕಾರಿನಲ್ಲಿ ಬಂದು ಕಳವು ಮಾಡಿಕೊಂಡು ಹೋದ ಪ್ರಕರಣದ ಆರೋಪಿಗಳನ್ನು ಶನಿವಾರ ಶಂಕರನಾರಾಯಣ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿ, ನ್ಯಾಯಲಾಯಕ್ಕೆ ಹಾಜರು ಪಡಿಸಿದ್ದಾರೆ
ದಿನಾಂಕ 25/06/2024 ರಂದು ರಾತ್ರಿ 1:48 ಗಂಟೆಗೆ ಶಂಕರನಾರಾಯಣ ಶಂಕರನಾರಾಯಣ ನಡೆದ ಗೋ ಕಳ್ಳತನಕ್ಕೆ ಸಂಬಂಧಿಸಿದಂತೆ ಭಾಗಿಯಾಗಿದ್ದ ಆರೋಪಿಗಳಾದ ಮಂಗಳೂರು ಆಸೈಗೋಳಿ ಎಂಬಲ್ಲಿನ 1) ನಿಝಾಮುದ್ದೀನ್ ಎ ಎಚ್, 2) ಮಹಮ್ಮದ್ ಅನ್ಸಾರ್ ಎಂಬವರನ್ನು ದಿನಾಂಕ: 29/06/2024 ರಂದು ಶಂಕರನಾರಾಯಣ ಠಾಣಾ ಪಿಎಸ್ಐರವರಾದ ನಾಸೀರ್ ಹುಸೇನ್ ಮತ್ತು ಶಂಭುಲಿಂಗಯ್ಯ ಎಮ್.ಇ. ಹಾಗೂ ಸಿಬ್ಬಂದಿಯವರು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ದಸ್ತಗಿರಿ ಮಾಡಿದ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಕಾರ್ಯಚರಣೆಯಲ್ಲಿ ಶಂಕರನಾರಾಯಣ ಪೊಲೀಸ್ ಉಪ ನಿರೀಕ್ಷಕರಾದ ನಾಸೀರ್ ಹುಸೇನ್, ಶಂಭುಲಿಂಗಯ್ಯ ಮತ್ತು ಸಿಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡ ಪಾಲ್ಗೊಂಡರು.