ಉಡುಪಿ: ಜೂನ್ 29 :ವಿಶ್ವದ ಆರನೇ ಅತಿ ದೊಡ್ಡ ರಿಟೇಲರ್ ಚಿನ್ನದ ಕಂಪನಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ ಗ್ರಾಹಕರಿಗಾಗಿ ಹೊರ ತಂದಿರುವ ‘ನೂವಾ’ ವಜ್ರಾಭರಣ ಸಂಗ್ರಹವನ್ನು ಮಳಿಗೆಯಲ್ಲಿ ದೀಪ್ತಿ ಪೈ, ಐಶ್ವರ್ಯ ಜಿ. ಭಂಡಾರಿ,ಶ್ರೇಯಾ ಎಸ್ ಪೂಜಾರಿ ಅನಾವರಣಗೊಳಿಸಿದರು.
13 ದೇಶಗಳಲ್ಲಿ 350 ಕ್ಕೂ ಹೆಚ್ಚು ಮಳಿಗೆ ಗಳನ್ನು ಹೊಂದಿರುವ ಮಲಬಾರ್ ಗೋಲ್ಡ್ ಈ ಹೊಸ ಆಭರಣ ಸಂಗ್ರಹ ಬಿಡುಗಡೆಯೊಂದಿಗೆ ಕರೀನಾ ಕಪೂರ್ ಅವರನ್ನು ರಾಯಬಾರಿಯನ್ನಾಗಿ ನೇಮಿಸಿದೆ.
ವಿನೂತನ ವಿನ್ಯಾಸದಿಂದ ಕೂಡಿರುವ ಆಭರಣಗಳ ಸಂಗ್ರಹವು ವಿಶೇಷ ವೇವ್ಸ್ ,ಫಾರ್ಮ್ಸ್,ಪೋಲ್ಡ್ ಮತ್ತು ಟೆಕ್ಟರ್ ಗಳನ್ನು ಒಳಗೊಂಡಿದೆ. ಇದನ್ನು ವಜ್ರಾಭರಣದ ಐಷಾರಾಮಿ ತುಣುಕುಗಳನ್ನು ಬಳಸಿ ಅತ್ಯಂತ ಜಾಣ್ಮೆ ಹಾಗೂ ನಿಖರತೆಯಿಂದ ಸಿದ್ದಪಡಿಸಲಾಗಿದೆ.
ನುವಾ ಸಂಗ್ರಹವನ್ನು ಉತ್ಸಾಹದಿಂದ ಪರಿಚಯಸಲಾಗಿದೆ.ಪ್ರಕೃತಿ ಮತ್ತು ಮಹಿಳೆಯರ ಅದಮ್ಯ ಮನೋಭಾವಗಳ ಸಂಭ್ರಮ ನೀಡಲಿದೆ.ಈ ಸಂಗ್ರಹದಲ್ಲಿ ಪ್ರತಿಯೊಂದು ಆಭರಣವನ್ನು ಅಪಾರ ಕಾಳಜಿ ಮತ್ತು ನಿಖರತೆಯಿಂದ ರಚಸಲಾಗಿದೆ.ಇದು ಇಂದಿನ ಮಹಿಳೆಯರ ಶ್ರೇಷ್ಠತೆ ಹಾಗೂ ಅವರ ಬದ್ಧತೆಗೆ ಸಾಕ್ಷಿ ಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಂದರ ತಿಂಗಳಾಯ,ಮುಸ್ತಫಾ ಎ.ಕೆ,ರಾಘವೇಂದ್ರ ನಾಯಕ್,ತಂಝೀಮ್ ಶಿರ್ವ ಉಪಸ್ಥಿತರಿದ್ದರು.ಕವಿತಾ ಪ್ರಾಸ್ತಾವಿಕವಾಗಿ ಮಾತಾಡಿ ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.